×
Ad

ಅಫಜಲಪುರ | ಅಂಬಿಗರ ಚೌಡಯ್ಯನವರ ಮೂರ್ತಿಗೆ ಅಪಮಾನ ಖಂಡಿಸಿ ಪ್ರತಿಭಟನೆ

Update: 2025-10-15 23:10 IST

ಕಲಬುರಗಿ: ಶಹಾಬಾದ್ ತಾಲೂಕಿನ ಮುತ್ತಗಾ ಗ್ರಾಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ನವರ ಮೂರ್ತಿಗೆ ಅವಮಾನ ಮಾಡಿದ ಕಿಡಿಗೇಡಿಗಳನ್ನು ಬಂಧಿಸುವಂತೆ ಆಗ್ರಹಿಸಿ ಬಹುಜನ ಸಮಾಜ ಪಾರ್ಟಿ ಅಫಜಲಪುರ ಘಟಕದಿಂದ ಪ್ರತಿಭಟಿಸಿ, ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಈ ವೇಳೆ ಬಿಎಸ್‌ಪಿ ರಾಜ್ಯ ಕಾರ್ಯದರ್ಶಿಗಳಾದ ಹುಚ್ಚೇಶ್ವರ ವಠಾರ, ಅಫಜಲಪುರ ವಿಧಾನಸಭಾ ಘಟಕದ ಅಧ್ಯಕ್ಷ ಡಾ.ಶಾಂತಮಲ್ಲಪ್ಪ ಹೊನ್ನುಂಗರ, ಜಿಲ್ಲಾ ಉಪಾಧ್ಯಕ್ಷರಾದ ನಾಗೇಶ್ ಬೇಲಸೂರ, ತಾಲ್ಲೂಕು ಉಪಾಧ್ಯಕ್ಷ, ಶೇಕ್ ಪಟೇಲ್, ಖಜಾಂಚಿ ಮೆಹಬೂಬ್ ಇನಾಮದಾರ್ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News