ಅಫಜಲಪುರ | ಕಬ್ಬು ಕಟಾವು ಹಿನ್ನೆಲೆ ಕಾಲುವೆ ನೀರು ತಾತ್ಕಾಲಿಕವಾಗಿ ತಡೆಯಲು ಶಿರವಾಳ ರೈತರ ಮನವಿ
ಅಫಜಲಪುರ : ಕಬ್ಬು ಕಟಾವು ನಡೆಯುತ್ತಿರುವ ಹಿನ್ನೆಲೆಯಲ್ಲಿ ಕಾಲುವೆ ನೀರನ್ನು ತಾತ್ಕಾಲಿಕವಾಗಿ ತಡೆಹಿಡಿಯಬೇಕೆಂದು ಶಿರವಾಳ ಗ್ರಾಮದ ರೈತರು ತಾಲೂಕ ಭೀಮಾ ಏತ ನೀರಾವರಿ ಯೋಜನೆಯ ಕಾರ್ಯನಿರ್ವಾಹಕ ಅಭಿಯಂತರ ಅಧಿಕಾರಿ ಶಿವಕುಮಾರ ಸ್ವಾಮಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಕುರಿತು ಶಿರವಾಳ ಗ್ರಾಮದ ರೈತ ಮುಖಂಡ ಶಾಂತು ಅಂಜುಟಗಿ ಮಾತನಾಡಿ, ಪ್ರಸ್ತುತ ನಮ್ಮ ಜಮೀನಗಳಲ್ಲಿ ಕಬ್ಬು ಕಟಾವು ನಡೆಯುತ್ತಿದೆ. ಆದರೆ ಕಾರ್ಖಾನೆಗೆ ಕಬ್ಬು ಸಾಗಣೆ ಮಾಡುವ ಸಂದರ್ಭದಲ್ಲಿ ಕಾಲುವೆಗಳಿಗೆ ನೀರು ಬಿಡುತ್ತಿರುವುದರಿಂದ ಜಮೀನಗಳಲ್ಲಿ ನೀರು ಹರಿದು ಸಾಗಣೆಗೆ ತೀವ್ರ ಅಡಚಣೆ ಉಂಟಾಗುತ್ತಿದೆ. ಆದ್ದರಿಂದ ತಕ್ಷಣವೇ ಕಾಲುವೆ ನೀರನ್ನು ತಾತ್ಕಾಲಿಕವಾಗಿ ನಿಲ್ಲಿಸಬೇಕು ಎಂದು ಮನವಿ ಮಾಡಿದರು.
ರೈತರ ಸಮಸ್ಯೆಗೆ ಸ್ಪಂದಿಸಿ, ಕಬ್ಬು ಕಟಾವು ಪೂರ್ಣಗೊಳ್ಳುವವರೆಗೆ ಕಾಲುವೆಗಳಿಗೆ ನೀರು ಬಿಡದಂತೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರೈತರಾದ ಹಣಮಂತ, ಪ್ರಕಾಶ ನಾಗೂರ, ಪ್ರಕಾಶ ಮಾವೂರ, ಗುರುಲಿಂಗ ದುಬಾರಿ, ಸಾಯಿಬಣ್ಣ ಜಮಾದಾರ, ಕುಶಾಲ ಅಂಜುಟಗಿ, ಧರೆಪ್ಪ ಅಂಜುಟಗಿ, ಯಲ್ಲಪ್ಪ ಉಕ್ಕಲಿ, ಹಣಮಂತ ಗಾಡಿವಡ್ಡರ ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು.