ಅಫಜಲಪುರ | ಸಿಜೆಐ ಗವಾಯಿ ಮೇಲೆ ಶೂ ಎಸೆತ ಘಟನೆ ಖಂಡಿಸಿ ತಾಲ್ಲೂಕು ವಕೀಲರ ಸಂಘದಿಂದ ಪ್ರತಿಭಟನೆ
ಕಲಬುರಗಿ: ಸುಪ್ರೀಂಕೋರ್ಟ್ ಕಲಾಪದಲ್ಲಿ ನ್ಯಾಯಾಧೀಶರತ್ತ ಬೂಟು ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಪಾದಿತ ವಕೀಲ ರಾಕೇಶ್ ಕಿಶೋರ್ ಅವರನ್ನು ಬಂಧಿಸಿ ತಕ್ಷಣವೇ ಗಡಿಪಾರು ಶಿಕ್ಷೆ ನೀಡಬೇಕೆಂದು ಆಗ್ರಹಿಸಿ, ಅಫಜಲಪುರ ತಾಲ್ಲೂಕು ವಕೀಲರ ಸಂಘದಿಂದ ತಹಶೀಲ್ದಾರರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಹಿರಿಯ ವಕೀಲರಾದ ಕೆ.ಜಿ. ಪೂಜಾರಿ ಅವರು ಈ ವೇಳೆ ಮಾತನಾಡಿ, ಸಂವಿಧಾನದ ಅಡಿಯಲ್ಲಿ ನ್ಯಾಯಾಂಗದ ಸರ್ವೋಚ್ಚ ಪೀಠವದಲ್ಲಿ ಇರುವ ನ್ಯಾಯಾಧೀಶರನ್ನು ಅವಮಾನಿಸುವುದು ದೇಶದ್ರೋಹದ ಅಪರಾಧವಾಗಿದೆ. ಆಪಾದಿತನನ್ನು ಗಡಿಪಾರು ಶಿಕ್ಷೆಗೆ ಗುರಿ ಪಡಿಸಬೇಕು ಎಂದು ಆಗ್ರಹಿಸಿದರು.
ವಸೀಮ ಜಾಗೀರ್ದಾರ್ ಮಾತನಾಡಿ, ಸನಾತನ ಧರ್ಮದ ರಕ್ಷಣೆಗಾಗಿ ನಾನು ಈ ಕಾರ್ಯ ಮಾಡಿದ್ದೇನೆ ಎಂದು ಹೇಳುವ ಅಪರಾಧಿಯ ಡೋಂಗಿ ಮಾತುಗಳನ್ನು ಯಾರೂ ಪರಿಗಣಿಸಬಾರದು, ಧರ್ಮ ರಕ್ಷಣೆಗಾಗಿ ಇಂಥ ಕಾರ್ಯ ಮಾಡಲು ಸಾಧ್ಯವಿಲ್ಲ, ಆಪಾದಿತನ ಉದ್ದೇಶಗಳು ಬೇರೆ ಇದ್ದಿರಬಹುದು, ಆದ್ದರಿಂದ ಆಪಾದಿತನನ್ನು ತಕ್ಷಣವೇ ಬಂಧಿಸಿ ದೇಶದ್ರೋಹದ ಪ್ರಕರಣವನ್ನು ದಾಖಲಿಸಬೇಕು ಎಂದು ಒತ್ತಾಯಿಸಿದರು.
ವಕೀಲರಾದ ಅನಿತಾ ಅವರು ಮಾತನಾಡಿ, ಇಂಥ ಪ್ರಕರಣ ನ್ಯಾಯಾಂಗದ ಇತಿಹಾಸದಲ್ಲಿ ನಡೆದಿಲ್ಲ ಮತ್ತು ನಡೆಯಬಾರದು, ಅಂತಹ ಕಠಿಣವಾದ ಶಿಕ್ಷೆಯನ್ನು ಆಪಾದಿತನಿಗೆ ಕೊಡಬೇಕು ಎಂದು ಹೇಳಿದರು.
ಯುವ ವಕೀಲರಾದ ಗುರು ಪೂಜಾರಿ, ವಕೀಲರ ಸಂಘದ ಅಧ್ಯಕ್ಷರಾದ ಎಸ್.ಎಸ್. ಪಾಟೀಲ್ ಅವರು ಮಾತನಾಡಿದರು.
ಅಫಜಲಪುರ ತಾಲ್ಲೂಕು ವಕೀಲರ ಸಂಘದ ಉಪಾಧ್ಯಕ್ಷರಾದ ಆರ್.ಎ.ನೂಲಾ, ಆರ್.ಎನ್.ಪೂಜಾರಿ, ಜಂಟಿ ಕಾರ್ಯದರ್ಶಿ ಸುರೇಶ ಅವಟೆ, ಖಜಾಂಚಿ ರಾಜೇಂದ್ರ ಸರ್ದಾರ್, ಕಾರ್ಯಕಾರಿ ಸಮಿತಿ ಸದಸ್ಯರಾದ ಸಿ.ಎಸ್.ಹಿರೇಮಠ, ಅನಿತಾ ದೊಡ್ಡಮನಿ, ಎಸ್. ಎನ್. ಪೂಜಾರಿ, ಎಸ್.ಬಿ.ತಳಕೇರಿ, ಎಸ್.ಟಿ.ರಾಥೋಡ್, ಪಿ.ಆರ್.ಪಾಟೀಲ್, ಎಂ.ಬಿ.ಪವಾರ್, ಎ.ಎಸ್.ಜಮಾದಾರ, ದತ್ತು ಪೂಜಾರಿ, ಸಿದ್ದರಾಮ ಇಸ್ಪೂರ, ಎಸ್.ಡಿ.ಮಂಜುನಾಥ್, ಸುಪ್ರಿಯಾ ಅಂಕಲಗಿ, ಡಿ.ಎಸ್.ಕುಂಬಾರ್, ಮತ್ತು ಸಲಹಾ ಸಮಿತಿಯ ಸದಸ್ಯರಾದ ಎಸ್.ಕೆ.ಪೂಜಾರಿ, ಎಸ್.ಜೆ.ಗುತ್ತೇದಾರ್, ನಾಗೇಶ್ ಕೊಳ್ಳಿ, ಮಂಜುನಾಥ್ ಕೊಳ್ಳಿ, ಅರ್ಜುನ್ ಕೆರೂರ್ ಮತ್ತು ಪಟ್ಟಣದ ಅನೇಕ ನಾಗರಿಕರು ಉಪಸ್ಥಿತರಿದ್ದರು.
ಇದಕ್ಕೂ ಮೊದಲು ಡಾ. ಬಿ. ಆರ್. ಅಂಬೇಡ್ಕರ್ ವೃತ್ತದಿಂದ ಮೆರವಣಿಗೆ ನಡೆಸಲಾಯಿತು.