Aland | ಜು.20ರಂದು ‘ವರದಕ್ಷಿಣೆ ಮುಕ್ತ ಬಂಜಾರಾ ಸಮಾಜ’ ಮಹಾ ಸಂಕಲ್ಪ ಸಮಾವೇಶ
ಆಳಂದ: ವರದಕ್ಷಿಣೆ ಪದ್ಧತಿ ನಿರ್ಮೂಲನೆ ಹಾಗೂ ಸಮಾಜದಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ‘ವರದಕ್ಷಿಣೆ ಮುಕ್ತ ಬಂಜಾರಾ ಸಮಾಜ’ ಮಹಾ ಸಂಕಲ್ಪ ಸಮಾವೇಶ ಜು.20ರಂದು ಬೆಳಿಗ್ಗೆ 11 ಗಂಟೆಗೆ ಪಟ್ಟಣದ ಹಳೆ ಚೆಕ್‌ಪೋಸ್ಟ್ ಸಮೀಪದ ರಾಯಲ್ ಪ್ಯಾಲೇಸ್ ಫಂಕ್ಷನ್ ಹಾಲ್‌ನಲ್ಲಿ ನಡೆಯಲಿದೆ.
ಈ ಕುರಿತು ಪ್ರಕಟಣೆ ನೀಡಿರುವ ಬಂಜಾರಾ ಕ್ರಾಂತಿದಳ ರಾಜ್ಯಾಧ್ಯಕ್ಷ ರಾಜು ಜೆ. ಚವ್ಹಾಣ ಹಾಗೂ ತರುಣ ಸಂಘದ ಅಧ್ಯಕ್ಷ ಶಿವಾಜಿ ಆರ್. ರಾಠೋಡ, ಸಮಾಜದ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲಾಗಲಿರುವ ಈ ಸಮಾವೇಶದಲ್ಲಿ ಸಮಾಜದ ಎಲ್ಲ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.
ಸಮಾಜದಲ್ಲಿ ವರದಕ್ಷಿಣೆ ಪದ್ಧತಿ ನಿರ್ಮೂಲನೆ, ಸಮಾನತೆ ಹಾಗೂ ಸಾಮಾಜಿಕ ಬದ್ಧತೆಯ ಸಂದೇಶ ಸಾರುವ ಉದ್ದೇಶದಿಂದ ಈ ಮಹಾ ಸಂಕಲ್ಪ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಸಮಾವೇಶದ ಯಶಸ್ಸಿಗಾಗಿ ಜೋಬು ಆಡೆ, ದಗಡು ಪವಾರ, ಮಾನು ಗೇಮು ರಾಠೋಡ, ಧನಸಿಂಗ್ ರಾಠೋಡ, ಶಿವಾಜಿ ಶಂಕರ ರಾಠೋಡ, ಅನಿಲ್ ಎಂ. ರಾಠೋಡ, ಕೆಂರು ರಾಠೋಡ, ಕೋಟೇಶ ರಾಠೋಡ, ದಿನೇಶ್ ಪವಾರ, ಸುಭಾಷ ಲಾಲು ಚವ್ಹಾಣ, ಮಾಣಿಕ ನರಸಿಂಗ್ ಜಾಧವ, ಸಜ್ಜನ್ ಚವ್ಹಾಣ, ಪಂಡಿತ್ ರಾಠೋಡ, ಠಾಕೂರ್ ಸಿಂಗ್ ರಾಠೋಡ, ಸಂತೋಷ ಮಾನು ಪವಾರ, ಸುಭಾಷ ಪವಾರ, ಕಿಶನ್ ರಾಠೋಡ, ವಿಶ್ವನಾಥ ಭೀಮು ರಾಠೋಡ, ಮೋತಿರಾಮ ಲಕ್ಷಣ ಪವಾರ, ಜೈರಾಮ ರಾಠೋಡ, ಗುಲಾಬ ಹಿರು ಚವ್ಹಾಣ, ಜೈರಾಜ ರಾಠೋಡ ಹಾಗೂ ರಾಜು ಗುಳೊಳ್ಳಿ ಸೇರಿದಂತೆ ಸಮಾಜದ ಅನೇಕ ಮುಖಂಡರು ನೇತೃತ್ವ ವಹಿಸಲಿದ್ದಾರೆ.
ಸಮಾಜದ ಪ್ರತಿಯೊಬ್ಬರೂ ಈ ಸಂಕಲ್ಪ ಸಮಾವೇಶದಲ್ಲಿ ಭಾಗವಹಿಸಿ ವರದಕ್ಷಿಣೆ ನಿರ್ಮೂಲನೆಗೆ ಕೈಜೋಡಿಸಬೇಕು ಎಂದು ಸಂಘಟಕರು ಮನವಿ ಮಾಡಿದ್ದಾರೆ.