×
Ad

ವಕ್ಫ್ ಅತಿಕ್ರಮಣ‌ ಆರೋಪ: ಬಿಜೆಪಿಯಿಂದ ಪ್ರತಿಭಟನೆ

Update: 2024-11-04 14:04 IST

ಕಲಬುರಗಿ: ರಾಜ್ಯದ ಪುರಾತನ ದೇವಾಲಯ, ದಲಿತರ ಭೂಮಿ ಮತ್ತು ಹಿಂದೂ ರೈತರ ಜಮೀನು ಹಾಗೂ ಸ್ಮಶಾನ ಭೂಮಿಗಳು ವಕ್ಪ್ ಮಂಡಳಿ ಅತಿಕ್ರಮಣ ಮಾಡಿದೆ ಎಂದು ಆರೋಪಿಸಿ  ಚಿತ್ತಾಪುರ ಪಟ್ಟಣದ ಲಾಡ್ಜಿಂಗ್ ಕ್ರಾಸ್'ನಲ್ಲಿ ಬಿಜೆಪಿ ಪಕ್ಷದ ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ ಅವರ ನೇತೃತ್ವದಲ್ಲಿ ಮುಖಂಡರು ಬೃಹತ್ ಪ್ರತಿಭಟನೆ ನಡೆಸಿದರು.

ಇದೇ ವೆಳೆ ಮಾನವ ಸರಪಳಿ ನಿರ್ಮಿಸಿ ಕೆಲ ಕಾಲ ರಸ್ತೆ ತಡೆ ನಡೆಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ ಪ್ರತಿಭಟನಾಕಾರರು ನಂತರ ತಹಶೀಲ್ದಾರ್ ನಾಗಯ್ಯ ಹಿರೇಮಠ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಣಿಕಂಠ ರಾಠೋಡ, ಶರಣಪ್ಪ ತಳವಾರ, ಮಲ್ಲಿಕಾರ್ಜುನ ಎಮ್ಮೆನೂರ್, ಬಸವರಾಜ ಬೆಣ್ಣೂರಕರ್, ಸೋಮಶೇಖರ ಪಾಟೀಲ್, ನಾಗರಾಜ ಭಂಕಲಗಿ, ಸುರೇಶ ಬೆನಕನಳ್ಳಿ, ಚಂದ್ರಶೇಖರ ಆವಂಟಿ, ನಾಗರಾಜ ಹೂಗಾರ, ಶಾಂತಕುಮಾರ ಮಳಖೇಡ, ಶ್ರೀಕಾಂತ್ ಸುಲೇಗಾಂವ, ಮಹ್ಮದ್ ಯೂನೂಸ್, ಪ್ರಭು, ಶ್ಯಾಮ್ ಮೇಧಾ, ಡಾ. ಮಹೇಂದ್ರ ಕೋರಿ, ಅಯ್ಯಪ್ಪ ರಾಮತಿರ್ಥ, ಮಹೇಶ, ಶಿವರಾಮ ಚವ್ಹಾಣ, ಬಾಲಾಜಿ ಬುರಬುರೆ, ನಾಗುಬಾಯಿ ಜಿತುರೆ, ಅಕ್ಕಮಹಾದೇವಿ ಸೇರಿದಂತೆ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News