×
Ad

ಕಲಬುರಗಿ| ಹಳೆ ವೈಷಮ್ಯದಿಂದ ವ್ಯಕ್ತಿಯೋರ್ವನ ಕೊಲೆ

Update: 2025-12-06 23:00 IST

ಕಲಬುರಗಿ: ಹಳೆ ವೈಷಮ್ಯದಿಂದ ವ್ಯಕ್ತಿಯೋರ್ವರನ್ನು ಮಾರಕಾಸ್ತ್ರಗಳಿಂದ ಕಡಿದು ಕೊಲೆ ಮಾಡಿರುವ ಘಟನೆ ಕಮಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ನಡೆದಿದೆ.

ಕಮಲಾಪುರ ಪಟ್ಟಣದ ನಿವಾಸಿ ಮುಹಮ್ಮದ್ ಹನೀಫ್ (65) ಕೊಲೆಯಾದವರು. ಅದೇ ಗ್ರಾಮದ ರಿಝ್ವಾನ್‌(25) ಎಂಬಾತ ಕೊಲೆ ಕೃತ್ಯ ನಡೆಸಿರುವುದಾಗಿ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಹಿಂದೆ ರಿಝ್ವಾನ್ ಹಾಗೂ ಮೃತ ಹನೀಫ್ ನಡುವೆ ಜಗಳವಾಗಿತ್ತು. ಇದೇ ಕಾರಣಕ್ಕೆ ಹಳೆ ವೈಷಮ್ಯ ಇಟ್ಟುಕೊಂಡು ಕಮಲಾಪುರದ ಜೇವಣಗಿ ರಸ್ತೆಯ ಕೆಇಬಿ ಕಚೇರಿ ಬಳಿ ಹನೀಫ್ ಅವರನ್ನು ರಿಝ್ವಾನ್ ಕೊಲೆ ಮಾಡಿದ್ದಾನೆ ಎಂದು  ಪೊಲೀಸ್ ಮೂಲಗಳು ತಿಳಿಸಿವೆ.

ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು, ಸ್ಥಳೀಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಕುರಿತು ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News