ಕಲಬುರಗಿ | ಕ್ರೈಸ್ತರಿಗೆ ಬಜೆಟ್‌ನಲ್ಲಿ ಅನುದಾನ ಮೀಸಲಿಡಲು ಸಚಿವ ಕೆ.ಜೆ.ಜಾರ್ಜ್‌ಗೆ ಮನವಿ
ಕಲಬುರಗಿ : ಅಲ್ಪ ಸಂಖ್ಯಾತರರ ಕ್ರೈಸ್ತರಿಗೆ ಮುಂಬರುವ ಕರ್ನಾಟಕ ಸರಕಾರದ ಬಜೆಟ್ನಲ್ಲಿ ಅನುದಾನ ಮೀಸಲಿಡಬೇಕು ಒತ್ತಾಯಿಸಿ ಕಲ್ಯಾಣ ಕರ್ನಾಟಕ ಪಾಸ್ಟರ್ಸ್ ಮತ್ತು ಲಿಡರ್ಸ್ ಫೋರಂ ಸಂಘದ ಸಂಚಾಲಕ ಸಂಧ್ಯಾರಾಜ ಸ್ಯಾಮುಯೆಲ್ ಅವರು ಕ್ರಿಶ್ವಿಯನ್ ಅಭಿವೃದ್ದಿ ಕಾರ್ಪೊರೇಶನ ಅಧ್ಯಕ್ಷರು ಹಾಗೂ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರಿಗೆ ಮನವಿ ಸಲ್ಲಿಸಿದರು.
ಕ್ರಿಶ್ಚಿಯನ್ ಡೆವೆಲಪ್ ಮೆಂಟ್ ಕಾರ್ಪೋರೇಶನ್ ಅಸ್ತಿತ್ವಕ್ಕೆ ಬಂದು ಸುಮಾರು ಒಂದು ವರ್ಷ ಆಗಿರುತ್ತದೆ. ನಿಮ್ಮ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ಆಯೋಜಿಸಲಾಗಿದೆ. ಆದರೆ ಸರಕಾರ ವತಿಯಿಂದ ಪೂರ್ತಿ ಸಮಿತಿ ರಚನೆಯಾಗಿರುವುದಿಲ್ಲ. ಇದನ್ನು ತಕ್ಷಣವೇ ರಾಜ್ಯದಲ್ಲಿ ಮತ್ತು ಜಿಲ್ಲಾ ಮಟ್ಟದಲ್ಲಿ ಸಮಿತಿಗಳು ಮಾಡಬೇಕು ಮತ್ತು ಸುಮಾರು 500 ಕೋಟಿ ರೂ. ಮೀಸಲಾತಿಯನ್ನು ನೀಡಬೇಕು.
ನಮ್ಮ ಕಲ್ಯಾಣ ಕರ್ನಾಟಕ ವಿಭಾಗದ ಕ್ರೈಸ್ತರ ಶಿಕ್ಷಣ ಸಂಸ್ಥೆಗಳು ಸುಮಾರು 135 ವರ್ಷದಿಂದ ಸೇವೆಯನ್ನು ಸಲ್ಲಿಸುತ್ತಿವೆ, ವಿಶೇಷವಾಗಿ ಮೆಥೋಡಿಸ್ಟ್ ಚರ್ಚ್ ಇಂಡಿಯಾ ಅಡಿಯಲ್ಲಿ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು ಶಿಕ್ಷಣ ಸಂಸ್ಥೆಗಳು ಸರಕಾರದಿಂದ ಅನುದಾನ ಹೊಂದಿರುತ್ತದೆ. ಆದರೆ ಈ ಶಿಕ್ಷಣ ಸಂಸ್ಥೆಗಳಿಗೆ ಅನುದಾನದ ಕೊರತೆಯಿಂದ ಮುಚ್ಚುವ ಹಂತದಲ್ಲಿದೆ. ನಮ್ಮ ಕೆ.ಕೆ.ಆರ್.ಡಿ.ಬಿ. ಅಡಿಯಲ್ಲಿ ಈ ಸಂಸ್ಥೆಗಳಿಗೆ ಉಳಿಸಲು ಮತ್ತು ಅಭಿವೃದ್ಧಿಪಡೆಸಲು ವಿಶೇಷವಾಗಿ 10.00 ಕೋಟಿ ರೂ.ಗಳನ್ನು ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.
ಮೆಥೋಡಿಸ್ಟ್ ಸಂಸ್ಥೆಯ ಆಸ್ಪತ್ರೆಗಳು ಯಾದಗಿರಿ ಹಾಗೂ ಬೀದರ್ ಜಿಲ್ಲೆಯಲ್ಲಿ ಇದ್ದು, ಸಧ್ಯ ಆರ್ಥಿಕ ಸೌಲಭ್ಯದ ಕೊರತೆಯಿಂದ ಮುಚ್ಚುವ ಹಂತದಲ್ಲಿದೆ. ಕ್ರಿಶ್ಚಿಯನ್ ಮಿಷನರಿ ಅಡಿಯಲ್ಲಿ ನಡೆಯುತ್ತಿರುವ ಈ ಆಸ್ಪತ್ರೆಗಳನ್ನು ಚಾಲ್ತಿಯಲ್ಲಿ ಇಡಲು ಸರಕಾರದಿಂದ ಸುಮಾರು 10.00 ಕೋಟಿ ರೂ. ಹಣ ಬಿಡುಗಡೆ ಮಾಡಲು ಮುಂಬರುವ ಬಜೆಟ್ ನಲ್ಲಿ ಪ್ರಸ್ತಾವನೆಯನ್ನು ಇಡಬೇಕು.
ಈ ವಿಷಯಗಳನ್ನು ತಾವು ಪರಿಗಣಿಸಿ ಮತ್ತು ಬರುವ ಬಜೆಟನಲ್ಲಿ ವಿಶೇಷ ಪ್ಯಾಕೇಜ್ ಕಲ್ಯಾಣ ಕರ್ನಾಟಕ ಕ್ರೈಸ್ತರ ಸಮುದಾಯಕ್ಕೆ ನೀಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.