×
Ad

ಕ್ಷೇತ್ರವನ್ನು ಕಡೆಗಣಿಸಿರುವ ಬಿಜೆಪಿ ನಾಯಕರಿಗೆ ಮತಕೇಳುವ ನೈತಿಕತೆ ಇಲ್ಲ : ಸಚಿವ ಪ್ರಿಯಾಂಕ್ ಖರ್ಗೆ

Update: 2024-05-01 12:44 IST

ಕಲಬುರಗಿ : ಕ್ಷೇತ್ರವನ್ನು ಸಂಪೂರ್ಣ ಕಡೆಗಣಿಸಿರುವ ಬಿಜೆಪಿ ನಾಯಕರು ಯಾವ ಸಾಧನೆ ಮಾಡಿದ್ದೇವೆ ಎಂದು ಮತ ಕೇಳಲು ಬರುತ್ತಿದ್ದಾರೆ. ಮತ ಕೇಳುವ ಯಾವ ನೈತಿಕತೆ ಅವರಿಗಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದರು.

ಡೋಣಗಾಂವ ಗ್ರಾಮದಲ್ಲಿ ನಡೆಸ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, "ಕೊರೋನಾ ಮಹಾಮಾರಿ ನಂತರ ಜನರ ಜೀವನದಲ್ಲಿ ಹಲವಾರು ಸಂಕಷ್ಟಗಳು ಎದುರಾದವು‌. ಅವರ ಜೀವನ ಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಪಕ್ಷ ಅಧಿಕಾರಕ್ಕೆ ಬಂದಾಗ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಮಾತು ಕೊಟ್ಟಿದ್ದೆವು. ಅದರಂತೆ ಸರ್ಕಾರ ಐದು ಯೋಜನೆಗಳನ್ನು ಜಾರಿಗೆ ತಂದಿದೆ" ಎಂದರು.

ಪ್ರಿಯಾಂಕ್ ಖರ್ಗೆ ಅವರಿಗೆ ಮೂರು ಸಲ ಆಶೀರ್ವದಿಸಿದ್ದೀರಿ, ಅದರಂತೆ ನನಗೂ ಆಶೀರ್ವಾದ ಮಾಡಿ‌ ಆಯ್ಕೆ ಮಾಡಿದರೆ ನಿಮ್ಮ ಸೇವೆ ಮಾಡುವುದಾಗಿ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಹೇಳಿದರು.

ವೇದಿಕೆಯ ಮೇಲೆ ಭೀಮಣ್ಣ ಸಾಲಿ, ಶರಣಪ್ಪ ಸುಣಗಾರ, ರಮೇಶ್ ಮರಗೋಳ, ನಾಗರೆಡ್ಡಿ ಪಾಟೀಲ ಕರದಾಳ, ಹಣಮಂತ ಸಂಕನೂರು ಸೇರಿದಂತೆ ಹಲವರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News