×
Ad

ಕಲಬುರಗಿ | ಕರವೇ ಸ್ವಾಭಿಮಾನಿ ಸೇನೆಯ ತಾಲ್ಲೂಕು ಅಧ್ಯಕ್ಷರಾಗಿ ಬುದಪ್ಪ ಎನ್.ಪೋತೆಕರ್ ಆಯ್ಕೆ

Update: 2025-05-21 21:31 IST

ಕಲಬುರಗಿ : ನಗರದ ಕನ್ನಡ ಭವನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ಜಿಲ್ಲಾಧ್ಯಕ್ಷ ಪುನಿತರಾಜ ಸಿ.ಕವಡೆ ನೇತೃತ್ವದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ಸಭೆ ನಡೆಸಲಾಯಿತು.

ಈ ಸಭೆಯಲ್ಲಿ ರಾಜ್ಯಾಧ್ಯಕ್ಷ ನಿಂಗರಾಜಗೌಡ್ರು ಇವರ ಆದೇಶದ ಮೇರೆಗೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ಕಲಬುರಗಿ ತಾಲೂಕು ಅಧ್ಯಕ್ಷರಾಗಿ ಬುದಪ್ಪ ಎನ್.ಪೋತೆಕರ್ ಅವರನ್ನು ಆಯ್ಕೆ ಮಾಡಲಾಯಿತು.

ನಿಂಗರಾಜಗೌಡ್ರು ಇವರ ನಾಯಕತ್ವದ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ತತ್ವ ಸಿದ್ಧಾಂತಗಳನ್ನು ಒಪ್ಪಿಕೊಂಡು ಸಂಘಟನೆಯಲ್ಲಿ ಸಕ್ರೀಯವಾಗಿ ದುಡಿಯುತ್ತಿದ್ದಿರೆಂದು ನಿಮ್ಮ ಸೇವೆಯನ್ನು ಪರಿಗಣಿಸಿ ನೇಮಕ ಮಾಡಿ ಈ ನೇಮಕಾತಿ ಪತ್ರ ನೀಡಲಾಯಿತು. ನೀಡಿರುವ ಗುರುತರ ಜವಾಬ್ದಾರಿಯನ್ನು ನಾಡು, ನುಡಿಯ ಬಗ್ಗೆ ಕಾಳಜಿಯೊಂದಿಗೆ ಅತ್ಯಂತ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ನಿರ್ವಹಿಸಿ ಸ್ವಾಭಿಮಾನಿ ಸೇನೆಯ ಘೋಷ ವಾಕ್ಯವಾದ ಸಮಗ್ರ ಕರ್ನಾಟಕ ಅಭಿವೃದ್ಧಿಯೇ ನಮ್ಮ ಗುರಿ ಎನ್ನುವ ಉದ್ದೇಶ ಈಡೇರಿಕೆಗೆ ಶ್ರಮಿಸಲೆಂದು ಆಶಿಸುತ್ತೇವೆ. ಎಂದು ಕವಡೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಶರಣು ಕುಂಬಾರ, ಶಿವಲಿಂಗಯ್ಯಾ ಗುತ್ತೇದಾರ, ಪ್ರಭುಲಿಂಗ ಮಾಲಿಪಾಟೀಲ ಸೇರಿದಂತೆ ಕಾರ್ಯಕರ್ತರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News