ಆಳಂದ–ಕಲಬುರಗಿ ಮಧ್ಯೆ ಬಸ್ ಸಂಚಾರಕ್ಕೆ ಚಾಲನೆ
ಆಳಂದ: ಆಳಂದ–ಕಲಬುರಗಿ ಮಧ್ಯೆ ಹೊಸ ಬಸ್ ಸಂಚಾರಕ್ಕೆ ಶಾಸಕ, ನೀತಿ ಆಯೋಗದ ರಾಜ್ಯ ಉಪಾಧ್ಯಕ್ಷ ಬಿ.ಆರ್.ಪಾಟೀಲ್ ಅವರು ಗುರುವಾರ ಚಾಲನೆ ನೀಡಿದರು.
ಪಟ್ಟಣದ ಬಸ್ ನಿಲ್ದಾಣದಲ್ಲಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸ್ಥಳೀಯ ಘಟಕಕ್ಕೆ ಬಿಡುಗಡೆಯಾದ ಎರಡು ಹೊಸ ಬಸ್‌ಗಳಿಗೆ ಶಾಸಕರು ಪೂಜೆ ಸಲ್ಲಿಸಿ, ಸಂಚಾರಕ್ಕೆ ಅಧಿಕೃತವಾಗಿ ಚಾಲನೆ ಕೊಟ್ಟರು.
ಬಳಿಕ ಮಾತನಾಡಿದ ಅವರು, ಜಿಲ್ಲಾ ಕೇಂದ್ರ ಕಲಬುರಗಿಗೆ ಸಂಚರಿಸುವ ಸಾರ್ವಜನಿಕರು ಮತ್ತು ವ್ಯಾಪಾರಿಗಳ ಬೇಡಿಕೆಯನ್ನು ಮನಗಂಡು ಹೊಸ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಸ್ಥಳೀಯ ಘಟಕಾಧಿಕಾರಿ ಯೋಗಿನಾಥ ಸರಸಂಬಿ ಅವರು ಬಸ್ ಸಂಚಾರ, ವೇಳಾಪಟ್ಟಿ ಹಾಗೂ ಸೇವಾ ವ್ಯವಸ್ಥೆಯ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಪಂಚಗ್ಯಾರoಟಿ ಅಧ್ಯಕ್ಷ ಶಿವುಪುತ್ರ ಪಾಟೀಲ, ಮುಖಂಡ ಮಲ್ಲಪ್ಪ ಹತ್ತರಕಿ, ಘಟಕದ ಮೇಲ್ವಿಚಾರಕ ಮುಹಮ್ಮದ್ ಖಾನ್, ವೈದ್ಯಕುಮಾರ ತೇಲ್ಕರ್, ಮಶಾಕ್ ಪಟೇಲ್, ಮುಹಮ್ಮದ್ ಯಾಸೀನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.