×
Ad

ಚಿಂಚೋಳಿ | ಬಸವೇಶ್ವರ ಜಯಂತಿಯಲ್ಲಿ ತಾಲೂಕಿನ ಮಠಾಧೀಶರನ್ನು, ಗಣ್ಯರನ್ನು ಕಡೆಗಣನೆ ಮಾಡಿ ರಾಜಕೀಯ ಪ್ರಯೋಜಿತ ಸಭೆ ಮಾಡಲಾಗುತ್ತಿದೆ: ವೀರಣ್ಣ ಗಂಗಾಣಿ ಆರೋಪ

Update: 2025-06-05 23:14 IST

ಕಲಬುರಗಿ: ಚಿಂಚೋಳಿಯಲ್ಲಿ ನಡೆಯುತ್ತಿರುವ ಬಸವೇಶ್ವರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ತಾಲೂಕಿನ ಮಠಾಧೀಶರನ್ನು, ಸ್ಥಳೀಯ ಗಣ್ಯರನ್ನು ಕಡೆಗಣನೆ ಮಾಡಿ ರಾಜಕೀಯ ಪ್ರಯೋಜಿತ ಸಭೆ ಮಾಡಲಾಗುತ್ತಿದೆ ಎಂದು ಸಮಾಜದ ಮುಖಂಡ ವೀರಣ್ಣ ಗಂಗಾಣಿ ಆರೋಪಿಸಿದ್ದಾರೆ.

ಚಿಂಚೋಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗುರುವಾರ ಪಟ್ಟಣದಲ್ಲಿ ಹಮ್ಮಿಕೊಂಡ ಬಸವೇಶ್ವರ ಜಯಂತ್ಯೋತ್ಸವದ ಧರ್ಮಸಭೆಯು ಬಸವೇಶ್ವರ ಜಯಂತಿ ಧರ್ಮಸಭೆ ಅಲ್ಲ. ಬದಲಾಗಿ ಇದೊಂದು ರಾಜಕೀಯ ಪ್ರಯೋಜಿತ ಸಭೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಮಗೆ ಬೇಕಾದ ಒಂದೆರಡು ಮಠಾಧೀಶರನ್ನು ಕರೆಸಿ, ರಾಜಕೀಯ ಪಕ್ಷಗಳ ಮುಖಂಡರಿಗೆ ಅಹ್ವಾನಿಸಿ ಧರ್ಮಸಭೆ ಮಾಡುವುದು ಸರಿಯಲ್ಲ, ಕೇವಲ ರಾಜಕೀಯ ಬಗ್ಗೆ ಚರ್ಚೆ ಆಗುತ್ತೆ ವಿನಃ ಧರ್ಮದ ಬಗ್ಗೆ ಅಲ್ಲ. ತಾಲ್ಲೂಕಿನ ಅನೇಕ ಮಠಾಧೀಶರು ಚಿಮ್ಮಾಯಿದ್ಲಾಯಿ, ಸುಲೇಪೇಟ, ನಿಡಗುಂದಾ, ದೇಗಲಮಡಿ,ಕೋಡ್ಲಿ, ಸೂಗೂರ, ಪೋಲಕಪಳ್ಳಿ, ಚಂದನಕೇರಾ, ಹೋಸಳ್ಳಿ, ಐನಾಪೂರ, ರಟಕಲ್ ಸೇರಿದಂತೆ ವಿವಿಧ ಮಠಾಧೀಆರಿಗೆ ಅಹ್ವಾನವನ್ನು ನೀಡದೆ, ಅಹ್ವಾನ ಪತ್ರಿಕೆಯಲ್ಲಿ ಹೆಸರು ನಮೂದಿಸದೆ ಜಯಂತ್ಯೋತ್ಸವ ಸಮಿತಿ ವೀರಶೈವ ಲಿಂಗಾಯತ ಸಮಾಜದ ಮಠಾಧೀಶರನ್ನೆ ನಿರ್ಲಕ್ಷ್ಯ ಮಾಡಿದೆ ಎಂದು ಆರೋಪ ಮಾಡಿದರು.

ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಉಡುಪಿ, ರೇವಣಸಿದ್ಧ ಮೋಘಾ ಮಾತನಾಡಿದರು.

ಚನ್ನಬಸಪ್ಪ ಕಲ್ಲೂರ್, ವಿರೇಂದ್ರ ಮೂರಾಡ, ವಿಜಯಕುಮಾರ ದಾದಿ, ಸಂಪತಕುಮಾರ ಮೋತಕಪಳ್ಳಿ, ಬಸವರಾಜ ಚನ್ನೂರ, ಆಕಾಶ ಕನಕಪೂರ ಇತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News