×
Ad

ಚಿಂಚೋಳಿ| ಶರಣ ಚಿಂತನಾ ಗೋಷ್ಠಿಗಳ ಸಮಾರೋಪ ಸಮಾರಂಭ

Update: 2025-08-27 21:52 IST

ಕಲಬುರಗಿ: ಚಿಂಚೋಳಿ ತಾಲೂಕಿನ ಚಿಮ್ಮನಚೋಡ ಗ್ರಾಮದ ಶ್ರೀ ಬಸವ ಪರುಷ ಕಟ್ಟೆಯ ಶ್ರಾವಣ ಶರಣ ಚಿಂತನಾ ಗೋಷ್ಠಿಗಳ ಸಮಾರೋಪ ಸಮಾರಂಭ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬೀದರ್ ನಗರದ ಶ್ರೀ ಬಸವ ಸೇವಾ ಪ್ರತಿಷ್ಠಾನದ ಪೀಠಾಧ್ಯಕ್ಷೆ ಪೂಜ್ಯ ಗಂಗಾಂಬಿಕೆ, ಚಿಮ್ಮನಚೋಡ ಗ್ರಾಮದ ಶ್ರೀ ಬಸವ ಪರುಷ ಕಟ್ಟೆ ಸಾಕ್ಷಾತ್ ಕಾರಣಿಕ ಪುರುಷ ಬಸವಣ್ಣನವರ ಕಾರಣಿಕ ಕಟ್ಟೆ ಆಗಿದೆ. ಶ್ರಾವಣ ಮಾಸದಾದ್ಯಂತ ನಿತ್ಯ ಬಸವ ಪೂಜೆ ವಚನ ಪ್ರಾರ್ಥನೆ, ಶರಣ ಚಿಂತನಗೊಷ್ಟಿ, ವಚನ ಪಠಣ, ವಚನ ಕಂಠಪಾಠ ಸ್ಪರ್ಧೆ, ವಚನ ಗಾಯನ, ವಚನ ನೃತ್ಯ, ಅನ್ನ ದಾಸೋಹ ನಿರಂತರವಾಗಿ ಮಾಡಿಕೊಂಡು ಬರುತ್ತಿರುವುದು ಸಂತಸ ಎಂದು ಹೇಳಿದರು.  

ಇದೇ  ವೇಳೆ ಬಸವ ಸಂಸ್ಕೃತಿ ಅಭಿಯಾನದ ಕರಪತ್ರಗಳನ್ನು ಬಿಡುಗಡೆ ಮಾಡಿ ಹೆಚ್ಚಿನ ಸಂಖ್ಯೆಯಲ್ಲಿ ಅಭಿಯಾನದಲ್ಲಿ ಪಾಲ್ಗೊಳ್ಳಲು ಕರೆ ನೀಡಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸಮಿತಿಯ ಅಧ್ಯಕ್ಷ ಆನಂದ ಕುಮಾರ ಬೆಡಸೂರು ವಂದನಾರ್ಪಣೆ ಮಾಡಿದರು. ಚಂದ್ರಯ್ಯ ಸ್ವಾಮಿಗಳು ವಚನ ಕಂಠಪಾಠ ಸ್ಪರ್ಧೆ ವಿಜೇತ ಮಕ್ಕಳಿಗೆ ಬಹುಮಾನ ವಿತರಣೆ ಮಾಡಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಕಲಾವಿದ ಮಹೇಶ ಬಡಿಗೇರ, ವಿದ್ಯಾಸಾಗರ ದೇಶಮುಖ, ಗವಿಸಿದ್ಧಪ್ಪ ಪಾಟೀಲ್, ಜಗನ್ನಾಥ್, ಲಿಂಗಾರ್ತಿ ನಾವದಗೇರೆ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.  

ಈ ವೇಳೆ ಅಬ್ದುಲ್ ಕಲಾಂ ಶಾಲೆ, ವಿಶ್ವಗಂಗಾ ಶಾಲೆ, ಮೌಲಾನಾ ಆಝಾದ್ ಶಾಲೆ ಮಕ್ಕಳ ವಚನ ನೃತ್ಯಗಳು ಗಮನ ಸೆಳೆದವು.

ಈ ಸಂದರ್ಭದಲ್ಲಿ ವೀರಸಂಗಯ್ಯ ಮದರಗಿ ಮಠ, ಜಗದೀಶ್ ಮರಪಳ್ಳಿ, ಸಂಗಮೇಶ ರಗಟೆ ಬಸವರಾಜ ಬುರುಕಪಳ್ಳಿ, ಗುರುಶಾಂತ ಹುಂಡೇಕಾರ, ಮಡಿವಾಳಪ್ಪ ರಗಟೆ, ಶಾಂತಪ್ಪ ದುಬಲಗುಂಡಿ, ಅರುಣವರ್ಧನ ಮರಪಳ್ಳಿ, ವೀರಶೆಟ್ಟಿ ದುಬಲಗುಂಡಿ, ಶಿವರುದ್ರಯ್ಯ ಹಿರೇಮಠ, ಶಾಂತಕುಮಾರ ಸೀತಾಳಗೇರಾ, ಶರಣಕುಮಾರ ನೇತಿ , ರಾಕೇಶಕುಮಾರ ಕೊಡಂಗಲ್, ಸಂತೋಷ ಕೊಡಂಗಲ್, ದಿಲೀಪ್ ಬೆಡಸೂರು, ಮಲ್ಲಿಕಾರ್ಜುನ ಬುರುಕಪಳ್ಳಿ, ಶಿವಶರಣ ಕೊಡಂಗಲ್, ಶಾಂತಾಬಾಯಿ ಕಿಳ್ಳಾ, ನಾಗಮ್ಮಾ ಮಠ, ಕವಿತಾ ಜಾಡರ, ರಾಧಿಕಾ ಹಿರೇಮಠ, ಅಶ್ವಿನಿ ರೆಡ್ಡಿ, ಸುಮಿತ್ರಾ ಮದರಗಿ ಮಠ, ವಿದ್ಯಾವತಿ ಮದರಗಿ ಮಠ ಮುಂತಾದವರು ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಸಿದ್ಧಲಿಂಗ ದುಬಲಗುಂಡಿ ಸ್ವಾಗತಿಸಿದರು. ಜ್ಯೋತಿ ಸಂಗೋಂಡ ನಿರೂಪಿಸಿ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News