ಚಿಂಚೋಳಿ | ಗ್ರಾಮ ಪಂಚಾಯತಿಯ ತೆರಿಗೆ ಹಣ ಬಿಡುಗಡೆ ಸಿಮೆಂಟ್ ಕಂಪನಿ ಎದುರು ಸದಸ್ಯರಿಂದ ಧರಣಿ
ಕಲಬುರಗಿ: ಚಿಂಚೋಳಿ ತಾಲ್ಲೂಕಿನ ಕಲ್ಲೂರ ರೋಡ ಗ್ರಾಮದ ಚೆಟ್ಟಿನಾಡ್ ಸಿಮೆಂಟ್ ಕಂಪನಿ ಎದುರು ಗರಗಪಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರು ಸದಸ್ಯರು 2025-26 ನೇ ಸಾಲಿನ ತೆರಿಗೆ ಹಣ ಬಿಡುಗಡೆ ಮತ್ತು ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ, ಧರಣಿ ಸತ್ಯಾಗ್ರಹ ನಡೆಸಿದರು.
ಈ ವೇಳೆ ಮಾತನಾಡಿದ ಗ್ರಾ.ಪಂ ಸದಸ್ಯ ಕೆ.ಮಹೇಶಕುಮಾರ, 2025-26 ನೇ ಸಾಲಿನ ಗರಗಪಳ್ಳಿ ಗ್ರಾಮ ಪಂಚಾಯತಿಗೆ ಚೆಟ್ಟಿನಾಡ ಕಂಪನಿಯಿಂದ ತೆರಿಗೆ ಹಣವನ್ನು ನೀಡುವಲ್ಲಿ ವಿಳಂಬವಾಗಿದೆ, ಇದರಿಂದ ಗ್ರಾಪಂ ವ್ಯಾಪ್ತಿಗೆ ಬರುವ ಪ್ರದೇಶದಲ್ಲಿ ಅಭಿವೃದ್ಧಿ ಕೆಲಸ ಮಾಡಲು ಕಷ್ಟವಾಗುತ್ತಿದೆ. ಶೀಘ್ರದಲ್ಲೇ ತೆರಿಗೆ ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಅಲ್ಲದೆ, ಗರಗಪಳ್ಳಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಆಟದ ಮೈದಾನ ನಿರ್ಮಾಣ ಮಾಡಬೇಕು, ಹೊಸ ವಿದ್ಯುತ್ ಪರಿವರ್ತಕ ಟಿ.ಸಿ ಅಳವಡಿಸಬೇಕು, ಕುಂಚಾವರಂ ಕ್ರಾಸ್‌ನಿಂದ ಗಣಾಪೂರ ವರೆಗೆ ಸಿ.ಸಿ ರಸ್ತೆ ನಿರ್ಮಾಣ ಮಾಡಬೇಕು, ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿ ಕಂಪನಿ ಮ್ಯಾನೇಜರ್ ಶೇಖರಬಾಬು ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಪಾರ್ವತಿ ಗುಂಡಪ್ಪ, ಉಪಾಧ್ಯಕ್ಷೆ ಶಾಂತಮ್ಮ, ಜಗಜೀವನ ರೆಡ್ಡಿ , ರೇವಣಸಿದ್ದಯ್ಯ ಸ್ವಾಮಿ, ಸಂಜೀವಕುಮಾರ, ಶ್ರೀದೇವಿ, ಚೆನ್ನಮ್ಮ ದೇವೆಂದ್ರ , ಮಾಲಾಶ್ರೀ, ಕೃಷ್ಣರಾಜ, ಚಂದ್ರಶೇಖರ, ಮಹೇಶ ಪಾಟೀಲ ಸೇರಿದಂತೆ ಇತರರು ಇದ್ದರು.