×
Ad

ಚಿಂಚೋಳಿ : ಧಾರಾಕಾರ ಮಳೆಗೆ ಮನೆ ಕುಸಿತ

Update: 2025-05-20 18:24 IST

ಕಲಬುರಗಿ : ಧಾರಾಕಾರ ಮಳೆಯಿಂದಾಗಿ ಮನೆಯೊಂದು ಕುಸಿದು ಬಿದ್ದಿರುವ ಘಟನೆ ಚಿಂಚೋಳಿ ತಾಲ್ಲೂಕಿನ ಗಾರಂಪಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ನಿವಾಸಿ ಸಾಮವ್ವ  ಎಂಬುವವರು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗುಸುತ್ತಿದ್ದು, ಈಗ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ಇದ್ದ ಒಂದು ಮನೆಯು ಕೂಡ ಕುಸಿದು ಬಿದ್ದ ಪರಿಣಾಮವಾಗಿ ಜೀವನ ದುಸ್ತರವಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ತಾಲ್ಲೂಕಿನ ದಂಡಾಧಿಕಾರಿ ಸುಬ್ಬಣ್ಣ ಜಮಖಂಡಿ ಅವರು, ನೊಂದ ಮಹಿಳೆಗೆ ಧೈರ್ಯ ತುಂಬಿ ಸರ್ಕಾರದಿಂದ ದೊರೆಯುವ ಸೌಲಭ್ಯವನ್ನು ಹಾಗೂ ಪ್ರಕೃತಿ ವಿಕೋಪದಿಂದ ಪರಿಹಾರ ಧನವನ್ನು ಒದಗಿಸುವಲ್ಲಿ ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಲೆಕ್ಕಾಧಿಕಾರಿ ಲಿಖಿತ ಮಂಜುನಾಥ, ಗೋಪಾಲ ಎಂ.ಪಿ, ಸೋಮಶೇಖರ್ ಪಾಟೀಲ್, ರಜನಿಕಾಂತ್ ಬುಳ್ಳ, ಪ್ರಕಾಶ್ ಭರಮ್, ಈಶ್ವರ ಮಳಗಿ,ಶಂಕರ ವಾಲಿಕರ್, ವಿನೋದ್ ಭರಮ್, ಮಲ್ಲಿಕಾರ್ಜುನ ಮೈಲಾರಿ, ಸದ್ದಮ್ಮ ಮೌಜನ್, ಪ್ರಭು ಭೋವಿ ಸೇರಿದಂತೆ ಇನ್ನಿತರ ಗ್ರಾಮಸ್ಥರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News