×
Ad

ಚಿಂಚೋಳಿ | ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸದಲ್ಲಿ ಸುರಕ್ಷತೆಗೆ ಆದ್ಯತೆ ನೀಡಿ: ಜಹಿರೋದ್ದಿನ್‌ ಪಟೇಲ್‌

Update: 2026-01-01 07:25 IST

ಚಿಂಚೋಳಿ: ತಾಲೂಕಿನ ಸುಲೇಪೇಟ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ (ಕಾಲೇಜು ವಿಭಾಗ) ವಿದ್ಯಾರ್ಥಿಗಳು ಒಂದು ದಿನದ ಶೈಕ್ಷಣಿಕ ಪ್ರವಾಸಕ್ಕೆ ಕೆಪಿಎಸ್ ಶಾಲೆಯ ಎಸ್.ಡಿಎಂಸಿ ಉಪಾಧ್ಯಕ್ಷ ಜಹಿರೋದ್ದಿನ್‌ ಪಟೇಲ್‌ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಹಿರೋದ್ದಿನ್‌ ಪಟೇಲ್‌ ಅವರು, ಪ್ರವಾಸದಲ್ಲಿ ಮಕ್ಕಳು ಉಪನ್ಯಾಸಕರ ಮಾರ್ಗದರ್ಶನದಲ್ಲಿ ಇರಬೇಕು ಮತ್ತು ಪ್ರವಾಸದ ಸಮಯದಲ್ಲಿ ವಿದ್ಯಾರ್ಥಿಗಳಿಗೂ ತೊಂದರೆಯಾಗದಂತೆ ನೋಡಿಕೊಳ್ಳಬೇಕು, ಪ್ರವಾಸಿ ತಾಣದಲ್ಲಿ ವಿದ್ಯಾರ್ಥಿಗಳು ಒಬ್ಬೊಬ್ಬರೆ ಸುತ್ತಾಡದೇ ಸುರಕ್ಷಿತವಾಗಿ ಪ್ರವಾಸವನ್ನು ಮುಗಿಸಿಕೊಳ್ಳಬೇಕು ಹಾಗೂ ಮಕ್ಕಳು ಪ್ರವಾಸದ ಸಂದರ್ಭದಲ್ಲಿ ಶಿಕ್ಷಕರು ಸುರಕ್ಷತೆಕಾಪಡಿಕೊಳ್ಳಬೇಕು ಎಂದು ಹೇಳಿದರು.

ಉಪನ್ಯಾಸಕ ಶರಣಬಸಪ್ಪ ಗಂಗಾಣಕರ್ ಮಾತನಾಡಿದರು.

ಈ ವೇಳೆ ಪ್ರಚಾರ್ಯ ನೀಝಾಮೋದ್ದಿನ್‌ , ಅಕ್ರಮ ಪಟೇಲ್, ಶರಣಬಸಪ್ಪ ಗಣಗಕರ್ , ಮಲ್ಲಿನಾಥ, ಅಣ್ಣರಾಯ ವಡ್ಡಳಿ, ಗಂಗಾಧರ ಹೋಸಳ್ಳಿ, ಮಧುಕರ್, ಉಮೇಶ, ಜಗನಮೋಹನ ರಡ್ಡಿ ಇತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News