×
Ad

ಚಿಂಚೋಳಿ | ಮುಹಮ್ಮದ್ ಪೈಗಂಬರ್ ಅವರ ಸಂದೇಶಗಳನ್ನು ವರ್ಣಿಸಲು ಸಾಧ್ಯವಿಲ್ಲ: ಸುಭಾಷ್ ರಾಠೋಡ್

Update: 2025-09-05 22:52 IST

ಕಲಬುರಗಿ: ಪ್ರವಾದಿ ಮುಹಮ್ಮದ್ ಪೈಗಂಬರ್ ಅವರು ಮನುಕುಲದ ಅಭ್ಯುದಯಕ್ಕೆ ನೀಡಿರುವ ಮಹತ್ವ ಮತ್ತು ಸಂದೇಶಗಳು ವರ್ಣಿಸಲು ಸಾಧ್ಯವಿಲ್ಲ ಎಂದು ಕೆಪಿಸಿಸಿ ಉಪಾಧ್ಯಕ್ಷ ಸುಭಾಷ ರಾಠೋಡ್ ಹೇಳಿದರು.

ಚಿಂಚೋಳಿ ಪಟ್ಟಣದ ಬಂಜಾರ ಭವನದಲ್ಲಿ ತಾಲ್ಲೂಕು ಮುಸ್ಲಿಂ ಕಮೀಟಿಯಿಂದ ಹಮ್ಮಿಕೊಂಡ ಈದ್ ಮಿಲಾದ್ ಹಬ್ಬದ ಪ್ರಯುಕ್ತ ರಕ್ತದಾನ ಶಿಬಿರ, ರೋಗಿಗಳಿಗೆ ಹಣ್ಣುಹಂಪಲು ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಮೂಲ ತತ್ವ ಮತ್ತು ಉದ್ದೇಶ ಶಾಂತಿ ಮತ್ತು ನ್ಯಾಯ ಪರಿಪಾಲನೆ ಆಗಿತ್ತು, ಅವರು ಮನುಕುಲದ ಅಭ್ಯುದಯಕ್ಕೆ ನೀಡಿರುವ ಮಹತ್ವ ಮತ್ತು ಸಂದೇಶಗಳು ವರ್ಣಿಸಲು ಸಾಧ್ಯವಿಲ್ಲ, ಪ್ರವಾದಿ ಮುಹಮ್ಮದ್ ಪೈಗಂಬರ್ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಕೊಟ್ಟಿದರು. ಮುಹಮ್ಮದ್ ಪೈಗಂಬರ್ ಅವರು ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಟ ನಡೆಸಿದ ವಿಶ್ವದ ಮಹಾನ್ ನಾಯಕರಾಗಿದ್ದು, ಅಸಮಾನತೆ, ಗುಲಾಮಗಿರಿ ವಿರುದ್ಧ ಸಮರ ಸಾರಿದ ಜಗತ್ತಿನ ಸರ್ವಶ್ರೇಷ್ಠ ಸಮಾಜ ಸುಧಾಕರು. ಪ್ರವಾದಿ ಸಂದೇಶಗಳು ಸಾರ್ವಕಾಲಿಕವಾಗಿದ್ದು, ಪ್ರವಾದಿಯಾಗಲೀ, ಇಸ್ಲಾಂ ಧರ್ಮವಾಗಲೀ ಯಾರ ಮೇಲೆಯೂ ಧರ್ಮದ ಬಗ್ಗೆ ಒತ್ತಡ ಹೇರಿಲ್ಲ. ಶಾಂತಿ ಸಂದೇಶ ಸಾರುವ ಧರ್ಮವೇ ಇಸ್ಲಾಂ ಎಂದರು.

ಸೊಂತ ನರನಾಳ ಮಠದ ಪಿಠಾಧಿಪತಿ ಶಿವುಕುಮಾರ ಸ್ವಾಮೀಜಿ ಮಾತನಾಡಿ, ರಕ್ತದಾನ ಮಹಾದಾನವಾಗಿದ್ದು, ಯುವ ಬಳಗದಿಂದ ರಕ್ತದಾನ ಶಿಬಿರ ಆಯೋಜಿಸಿ ಅಗತ್ಯವಿರುವವರಿಗೆ ನೆರವಾಗುವ ಸಾಮಾಜಿಕ ಕಾರ್ಯ ಎಲ್ಲರಿಗೂ ಮಾದರಿಯಾಗಿದೆ. ಮಾನವೀಯ ಮೌಲ್ಯದ ಜೊತೆಯಲ್ಲಿ ಈ ಬದುಕನ್ನು ಯಾವ ರೀತಿ ಸಾರ್ಥಕ್ಯ ಗೊಳಿಸಬಹುದು ಎಂಬುದನ್ನು ಲೋಕಕ್ಕೆ ಪ್ರವಾದಿ ಪೈಗಂಬರರು, ಬಸವಣ್ಣ ಸೇರಿದಂತೆ ದಾರ್ಶನಿಕರು ವಿಶ್ವಮಾನವ ಕುಲಕೋಟಿಗೆ ತಿಳಿಸಿ ಕೊಟ್ಟಿದ್ದಾರೆ. ನಾವೆಲ್ಲರೂ ಅದನ್ನು ಪಾಲಿಸುವ ಕೆಲಸ ಮಾಡಬೇಕು ಎಂದರು.

ಬಡಿ ದರ್ಗಾ ಸಾಹೇಬ್ ಅಕ್ಬರ ಹುಸ್ಸೇನಿ, ಬಾಬುರಾವ್‌ ಪಾಟೀಲ್‌, ಹಿರಿಯ ಮುಖಂಡ ಕಾಂಗ್ರೆಸ್ ಮುಖಂಡ ಭೀಮರಾವ ತೇಗಲತಿಪ್ಪಿ ಅಬ್ದುಲ ಬಾಸೀದ್, ಮಾತನಾಡಿದರು.

ಡಾ.ಗಫಾರ್‌, ಮತೀನ ಸೌಧಗರ್, ಆನಂದ ಟೈಗರ್, ಅಬ್ದುಲ್‌ ರೌಫ್ ಮಿರಿಯಾಣ, ಕೆ.ಎಮ್ ಬಾರಿ, ಬಸವರಾಜಮಾಲಿ, ಲಕ್ಷ್ಮಣ ಆವುಂಟಿ, ಶರಣು ಪಾಟೀಲ್‌, ಅನ್ವರ್‌ ಖತೀಬ್ , ಶಬ್ಬೀರ್‌ ಅಹ್ಮದ್‌, ಹಾದಿ ಸಾಬ, ಎಂಡಿ ಆಹ್ಮದ್ ಬಾಗವಾನ್, ಮೂಶ್ರಫ ಖಾನ್, ಜಿಯಾಉರ್ ರೆಹಮನ್ ಸೇರಿದಂತೆ ಇತರರು ಇದ್ದರು.

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News