×
Ad

Chitapur | ಮುಂಗಾರು ಬೆಳೆ ವಿಮೆ ನೋಂದಣಿಗೆ ಜು.15, ಜು.31 ಅಂತಿಮ ದಿನ : ಸಂಜೀವಕುಮಾರ ಮಾನಕರೆ

Update: 2026-07-06 18:41 IST

ಚಿತ್ತಾಪುರ : 2026-27ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ (ವಿಮಾ) ಯೋಜನೆಯಡಿ ರೈತರು ವಿಮಾ ನೊಂದಣಿ ಮಾಡಿಸಲು ಮುಂಗಾರು ಹಂಗಾಮಿನ ಬೆಳೆಗಳಾದ ಹೆಸರು, ಉದ್ದು ಬೆಳೆಗಳಿಗೆ ಜು.15 ಮತ್ತು ತೊಗರಿ, ಹತ್ತಿ ಬೆಳೆಗಳಿಗೆ ಜು.31 ರಂದು ಕೊನೆ ದಿನವಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಸಂಜೀವಕುಮಾರ ಮಾನಕರೆ ತಿಳಿಸಿದ್ದಾರೆ.

ಪ್ರಸ್ತುತ ಸಾಲಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ (ವಿಮಾ) ಯೋಜನೆ ಅನುಷ್ಠಾನಗೊಳಿಸಲು Indusind GENERAL INSURANCE ಕಂಪನಿಯನ್ನು ನಿಗಧಿಪಡಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ಮಳೆ ಅಭಾವ ಅಥವಾ ಇತರೆ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದ ಅಥವಾ ಸ್ಥಳ ನಿರ್ಧಿಷ್ಟ, ಪೃಕೃತಿ ವಿಕೋಪಗಳಾದ ಆಲಿಕಲ್ಲು ಮಳೆ, ಭೂ ಕುಸಿತ, ಬೆಳೆ ಮುಳುಗಡೆ, ಮೇಘಾ ಸ್ಪೋಟ ಹಾಗೂ ಗುಡುಗು ಮಿಂಚುಗಳಿಂದಾಗಿ ಉಂಟಾಗುವ ಬೆಂಕಿ ಅವಗಡ ಸಂದರ್ಭದಲ್ಲಿ ಬೆಳೆ ನಷ್ಟವುಂಟಾದರೆ ರೈತರು ಬೆಳೆ ವಿಮೆಯ ಸೌಲಭ್ಯ ಪಡೆಯಬಹುದು ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಬೆಳೆ ವಿಮೆ ಮಾಡಿಸಬೇಕಾಗಿ ಎಲ್ಲಾ ರೈತರಲ್ಲಿ ಮನವಿ ಮಾಡಿದ್ದಾರೆ.

ಹೆಸರು (ಮಳೆ ಆಶ್ರಿತ) ರೈತರ ಪಾಲು ವಿಮಾ ಕಂತು ರೂ /ಪ್ರತಿ ಎಕರೆಗೆ 321, ಉದ್ದು (ಮಳೆ ಆಶ್ರಿತ) ರೈತರ ಪಾಲು ವಿಮಾ ಕಂತು ರೂ /ಪ್ರತಿ ಎಕರೆಗೆ 314, ವಿಮೆ ಪಾವತಿಸಲು ಜು.15 ಕೊನೆಯ ದಿನಾಂಕ. ತೊಗರಿ (ಮಳೆ ಆಶ್ರಿತ) ರೈತರ ಪಾಲು ವಿಮಾ ಕಂತು ರೂ /ಪ್ರತಿ ಎಕರೆಗೆ 466, ಹತ್ತಿ (ಮಳೆ ಆಶ್ರಿತ) ರೈತರ ಪಾಲು ವಿಮಾ ಕಂತು ರೂ /ಪ್ರತಿ ಎಕರೆಗೆ 1208 ವಿಮೆ ಪಾವತಿಸಲು ಜು.31 ಕೊನೆಯ ದಿನಾಂಕವಾಗಿದೆ. ಹೀಗಾಗಿ ರೈತರು ಹೆಚ್ಚಿನ ಮಾಹಿತಿಗಾಗಿ ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಹಾಗೂ ನೋಂದಣಿಗಾಗಿ ಹತ್ತಿರದ ಬ್ಯಾಂಕುಗಳಿಗೆ, ನಾಗರಿಕಾ ಸೇವಾ ಕೆಂದ್ರ (CSC CENTER) ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News