×
Ad

Kalaburagi | ಜಿಲ್ಲಾ ಮಟ್ಟದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆ: ಹೆಸರು ನೋಂದಣಿಗೆ ಜು.24 ರಂದು ಕೊನೆಯ ದಿನ

Update: 2026-07-06 19:49 IST

ಕಲಬುರಗಿ : ಕಲಬುರಗಿ ಜಿಲ್ಲಾ ವಿಜ್ಞಾನ ಕೇಂದ್ರದಿಂದ ಕಲಬುರಗಿ ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ 2026ರ ಜು.25 ರಂದು ಬೆಳಿಗ್ಗೆ 11 ಗಂಟೆಗೆ 'ಜಿಲ್ಲಾ ಮಟ್ಟದ ವಿಜ್ಞಾನ ರಸಪ್ರಶ್ನೆ' ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ವಿಜ್ಞಾನ ಅಧಿಕಾರಿಗಳು ತಿಳಿಸಿದ್ದಾರೆ.

ಸ್ಪರ್ಧೆಯು ಪ್ರೌಢಶಾಲಾ (8ನೇ ರಿಂದ 10ನೇ ತರಗತಿ) ವಿದ್ಯಾರ್ಥಿಗಳಿಗೆ ನಡೆಸಲಾಗುತ್ತದೆ. ಪ್ರತಿ ಶಾಲೆಯಿಂದ 8 ರಿಂದ 10 ನೇ ತರಗತಿಯವರೆಗೆ ಓದುತ್ತಿರುವ ಇಬ್ಬರು ವಿದ್ಯಾರ್ಥಿಗಳನ್ನು ಒಳಗೊಂಡ ತಂಡವನ್ನು ಕಳುಹಿಸಬಹುದಾಗಿದೆ. ಒಬ್ಬ ಬೆಂಗಾವಲು ಶಿಕ್ಷಕ ತಂಡದೊಂದಿಗೆ ಕಳುಹಿಸಬೇಕು. ಜು.25 ರಂದು ಬೆಳಿಗ್ಗೆ 11 ಗಂಟೆಗೆ ಪ್ರಾಥಮಿಕ ಸುತ್ತಿಗೆ ಲಿಖಿತ ರಸಪ್ರಶ್ನೆಯನ್ನು ನಡೆಸಲಾಗುತ್ತದೆ. ಪ್ರಾಥಮಿಕ ಸುತ್ತಿನಿಂದ ಆಯ್ಕೆಯಾದ ತಂಡಗಳನ್ನು ಮುಂದಿನ ಸತತ ಸುತ್ತುಗಳಿಗೆ ಕರೆಯಲಾಗುತ್ತದೆ.

ಪ್ರಾಥಮಿಕ ಸುತ್ತು (ಲಿಖಿತ), ಕ್ವಾರ್ಟರ್ ಫೈನಲ್ (ಮೌಖಿಕ), ಸೆಮಿಫೈನಲ್ (ಮೌಖಿಕ) ಮತ್ತು ಅಂತಿಮ (ಮೌಖಿಕ) ಸುತ್ತುಗಳು ಇರುತ್ತವೆ. ಪ್ರತಿ ಸುತ್ತಿನಲ್ಲಿ ಆಯ್ಕೆಯಾದ ತಂಡಗಳು ಮುಂದಿನ ಸುತ್ತಿಗೆ ಅರ್ಹವಾಗಿರುತ್ತಾರೆ. ರಸಪ್ರಶ್ನೆಯನ್ನು ಇಂಗ್ಲಿಷ್‌ ಮತ್ತು ಕನ್ನಡದಲ್ಲಿ ಮಾತ್ರ ನಡೆಸಲಾಗುತ್ತದೆ. ರಸಪ್ರಶ್ನೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಅಥವಾ ಅವರ ಮಾರ್ಗದರ್ಶಿ ಶಿಕ್ಷಕರಿಗೆ ಟಿಎ ಅಥವಾ ಡಿಎ ಪಾವತಿಸಲಾಗುವುದಿಲ್ಲ.

ರಸಪ್ರಶ್ನೆಯು ಸಾಮಾನ್ಯವಾಗಿ ಸಾಮಾನ್ಯ ವಿಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನದ ಅನ್ವಯಿಕೆ ಮತ್ತು ಪ್ರಸ್ತುತ ಪ್ರವೃತ್ತಿಗಳನ್ನು ಆಧರಿಸಿರುತ್ತದೆ. 2026ರ ಜುಲೈ 24ರ ಸಂಜೆ 5 ಗಂಟೆಯೊಳಗಾಗಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು.

ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ವಿಜ್ಞಾನ ಕೇಂದ್ರದ ದೂರವಾಣಿ ಸಂಖ್ಯೆ 08472-270608 ಗೆ ಅಥವಾ ವಾಟ್ಸಾಪ್ ಸಂಖ್ಯೆ 9788078048 ಮೂಲಕ ಸಂಪರ್ಕಿಸಲು ಕೋರಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News