ಚಿತ್ತಾಪುರ | ಲೋಕ ಕಲ್ಯಾಣಕ್ಕಾಗಿ ಡೋಣಗಾಂವ ಗ್ರಾಮದಿಂದ ಮೈಲಾಪುರಕ್ಕೆ ಪಾದಯಾತ್ರೆ
ಚಿತ್ತಾಪುರ : ತಾಲೂಕಿನ ಡೋಣಗಾಂವ ಗ್ರಾಮದಿಂದ ಯಾದಗಿರಿ ಜಿಲ್ಲೆಯ ಮೈಲಾಪುರ ಗ್ರಾಮದ ಮೈಲಾರಲಿಂಗೇಶ್ವರ ದೇವಸ್ಥಾನದವರೆಗೆ ಲೋಕ ಕಲ್ಯಾಣಕ್ಕಾಗಿ 10ನೇ ವರ್ಷದ ಪಾದಯಾತ್ರೆಯನ್ನು ಗ್ರಾಮದ ಯುವ ಮುಖಂಡರು ಹಮ್ಮಿಕೊಂಡರು.
ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಸದಸ್ಯ ಶರಣು ಡೋಣಗಾಂವ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಲೋಕ ಕಲ್ಯಾಣಕ್ಕಾಗಿ ಡೋಣಗಾಂವ ಗ್ರಾಮದಿಂದ ಮೈಲಾಪುರದವರೆಗೆ 10ನೇ ವರ್ಷದ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಪಾದಯಾತ್ರೆಯಲ್ಲಿ ಭಾಗವಹಿಸುವ ಯಾತ್ರಿಕರಿಗೆ ವಸತಿ ಹಾಗೂ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದ್ದು, ಯಾತ್ರೆ ಮುಗಿದ ನಂತರ ಮರಳಿ ಗ್ರಾಮಕ್ಕೆ ಬರುವುದಕ್ಕಾಗಿ ವಾಹನ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ಹೇಳಿದರು.
ಇದೇ ವೇಳೆ ಗ್ರಾಮದ ಹಿರಿಯ ಮುಖಂಡರು ಪಾದಯಾತ್ರೆ ಹಮ್ಮಿಕೊಂಡ ಯುವ ಮುಖಂಡರನ್ನು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ್ ಹೊನ್ನಪುರ್, ಕಾಶಪ್ಪ ಹಲಕಟ್ಟಿ, ಶಿವಯ್ಯ ಸ್ವಾಮಿ, ಅಂಬರೀಷ್ ಬಾನರ್, ಸಿದ್ದು ಮೆಂಗನೂರ್, ಶಿವರಾಜ್ ಬಾನರ್, ಶ್ರೀಶೈಲ್ ಪೂಜಾರಿ, ಮಂಜುನಾಥ್ ಚೂರಿ, ಶರಣಪ್ಪ ಪೂಜಾರಿ, ಈಶಪ್ಪ ಮುತ್ತಗಿ, ದೇವಪ್ಪ ನಂಜಳ್ಳಿ, ಜಟ್ಟೆಪ್ಪ ಪೂಜಾರಿ, ಹನುಮಂತ ಹಲಕಟ್ಟಿ, ಶರಣಪ್ಪ ಮನೆಗರ್, ಮಂಜುನಾಥ್ ತಳವಾರ್, ಕಾಶಪ್ಪ ಜಿಂಗಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.