×
Ad

ಅಫಜಲಪುರ ಮಳೆಂದ್ರ ಮಠದಲ್ಲಿ ಶಾಮನೂರು ಶಿವಶಂಕರಪ್ಪ ಅವರಿಗೆ ಸಂತಾಪ ಸಭೆ

Update: 2025-12-16 19:11 IST

ಕಲಬುರಗಿ:  ಹಿರಿಯ ಶಾಸಕ, ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಶಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ಅಫಜಲಪುರದ ಶ್ರೀ ಮಳೆoದ್ರ ಸಂಸ್ಥಾನ ಹಿರೇಮಠದಲ್ಲಿ ಶ್ರದ್ಧಾಂಜಲಿ ಸಭೆಯನ್ನು ಏರ್ಪಡಿಸಲಾಗಿತ್ತು.

ಅಖಿಲ ಭಾರತ ವೀರಶೈವ ಮಹಾಸಭೆ ತಾಲೂಕು ಘಟಕದಿಂದ ಏರ್ಪಡಿಸಲಾದ ಈ ಸಭೆಯಲ್ಲಿ ಸಂಘದ ಅಧ್ಯಕ್ಷರಾದ ಚಂದ್ರಶೇಖರ್ ಕರಜಗಿ ಮಾತನಾಡಿ, ಶಾಮನೂರು ಶಿವಶಂಕರಪ್ಪ ಅವರು, ವೀರಶೈವ ಸಮಾಜದ ಅಭಿವೃದ್ಧಿಗೆ ಶ್ರಮಿಸಿದ ರೀತಿಯನ್ನು ಬಣ್ಣಿಸಿದರು. 

ಇದೇ ಸಂದರ್ಭದಲ್ಲಿ ವೀರಶೈವ ಸಮಾಜದ ಮಾಜಿ ತಾಲೂಕು ಅಧ್ಯಕ್ಷ ಶಿವಪುತ್ರಪ್ಪ ಸಂಗೋಳಗಿ ಮತ್ತು ಯುವ ಮುಖಂಡರಾದ ಚಿದಾನಂದ ಮಠ ಅವರು ಮಾತನಾಡಿದರು.

ಈ ವೇಳೆ ಶರಣ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷರಾದ ಬಸವರಾಜ್ ಚಾಂದಕೋಟೆ,  ಗಂಗಾಧರ ಶ್ರೀಗಿರಿ, ಶರಣು ನೂಲಾ ಸೋಂದೆಸಾಬ್, ಚಿನ್ನು ಮಿಯಾ, ಶ್ರೀಶೈಲ್ ಗುಣಾರಿ, ಅಪ್ಪಶಾ ನಂದಿಗೌಡ, ಕಂಟೆಪ್ಪ ಬಳೂರಗಿ, ಶ್ರೀಮಂತ ಬಿರಾದಾರ್, ರೇವಪ್ಪ ಕರಜಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.  

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News