ಶರಣಬಸವ ವಿವಿಯಲ್ಲಿ ಕೊಚ್ಚಿನ್ ಅಂತರರಾಷ್ಟ್ರೀಯ ಭಾಷಾ ಅಕಾಡೆಮಿ, ಅಲ್ಪಾವಧಿಯ ಕೋರ್ಸ್ ನೀಡುವ ಚರ್ಚೆ
ಕಲಬುರಗಿ: ಶರಣಬಸವ ವಿಶ್ವವಿದ್ಯಾಲಯವು ಅಂತರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಪಡೆದ ಕೊಚ್ಚಿನ್ ಅಂತರರಾಷ್ಟ್ರೀಯ ಭಾಷಾ ಅಕಾಡೆಮಿಯೊಂದಿಗೆ ಎಲ್ಲಾ ಅಧ್ಯಾಪಕರ ಮತ್ತು ವಿದ್ಯಾರ್ಥಿಗಳ ಇಂಗ್ಲಿಷ್ ಜ್ಞಾನವನ್ನು ಸುಧಾರಿಸಲು ಚರ್ಚೆ ನಡೆಸುತ್ತಿದೆ.
ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ಅನಿಲಕುಮಾರ ಬಿಡವೆ, ಕುಲಸಚಿವ ಡಾ.ಎಸ್.ಜಿ.ಡೊಳ್ಳೇಗೌಡರ್, ಡೀನ್ ಡಾ.ಲಕ್ಷ್ಮಿ ಪಾಟೀಲ್ ಮಾಕಾ ಮತ್ತು ಇತರ ಹಿರಿಯ ಅಧಿಕಾರಿಗಳ ತಂಡವು ಕೊಚ್ಚಿನ್ ಅಂತರಾಷ್ಟ್ರೀಯ ಭಾಷಾ ಅಕಾಡೆಮಿ ಸಂಸ್ಥಾಪಕ ಡಾ.ಹೆಲೆನ್ ಮ್ಯಾಕ್ಲ್ವೈನ್ ಮತ್ತು ಅದರ ನಿರ್ದೇಶಕ ಜೈಮಾನ್ ಜಾರ್ಜ್ ಅವರೊಂದಿಗೆ ವಿವರವಾದ ಚರ್ಚೆ ನಡೆಸಿ, ಶಿಕ್ಷಕರಲ್ಲಿ ಇಂಗ್ಲಿಷ್ ಜ್ಞಾನವನ್ನು ಹೆಚ್ಚಿಸುವಲ್ಲಿ, ದೇಶ ಮತ್ತು ವಿದೇಶಗಳಲ್ಲಿ ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ಉದ್ಯೋಗಾವಕಾಶಗಳ ಹೊಸ ಮಾರ್ಗಗಳನ್ನು ತೆರೆಯುವಲ್ಲಿ ಈ ಪ್ರಸ್ತಾವನೆಯನ್ನು ಅಂತಿಮಗೊಳಿಸಿದರು.
ಕೇಂಬ್ರಿಡ್ಜ್ ವಿಶ್ವವಿದ್ಯಾಲಯ ಮತ್ತು ಲಂಡನ್ ಟ್ರಿನಿಟಿ ಕಾಲೇಜುಗಳಂತಹ ಪ್ರಸಿದ್ಧ ಶಿಕ್ಷಣ ಸಂಸ್ಥೆಗಳ ಸಹಯೋಗದೊಂದಿಗೆ ನೀಡಲಾಗುವ ವಿವಿಧ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ ಅಲ್ಪಾವಧಿಯ ಕೋರ್ಸ್ ಗಳನ್ನು ವಿವಿಧ ಹಂತಗಳಲ್ಲಿರುವ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಹೇಗೆ ಪ್ರಯೋಜನವಾಗುತ್ತದೆಂದು ಡಾ.ಮ್ಯಾಕ್ಲ್ವೈನ್ ಮತ್ತು ಜಾರ್ಜ್ ವಿವರಿಸಿದರು.
ಕೊಚ್ಚಿನ್ ಅಂತರಾಷ್ಟ್ರೀಯ ಭಾಷಾ ಅಕಾಡೆಮಿ ನೀಡುವ ಕೋರ್ಸ್ ಗಳಿಂದ ಶರಣಬಸವ ವಿಶ್ವವಿದ್ಯಾಲಯವು ಪ್ರಭಾವಿತವಾಗಿದೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಆಯ್ದ ಕೋರ್ಸ್ ಗಳನ್ನು ಪ್ರಾರಂಭಿಸಲು ತಿಳುವಳಿಕೆ ಪತ್ರ ಮೂಲಕ ಕೊಚ್ಚಿನ್ ಅಂತರಾಷ್ಟ್ರೀಯ ಭಾಷಾ ಅಕಾಡಮಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲು ವಿಶ್ವವಿದ್ಯಾಲಯವು ಆಸಕ್ತಿಯನ್ನು ವ್ಯಕ್ತಪಡಿಸಿದೆ ಎಂದು ಪ್ರೊ. ಬಿಡವೆ ಹೇಳಿದರು.
ವಿದೇಶಗಳಲ್ಲಿ ತಮ್ಮ ವೃತ್ತಿಪರ ವೃತ್ತಿಜೀವನವನ್ನು ಮುಂದುವರಿಸಲು ಬಯಸುವ ವಿದ್ಯಾರ್ಥಿಗಳು IELTS ಪರೀಕ್ಷೆಯನ್ನು ಪೂರ್ಣಗೊಳಿಸಬೇಕಾಗುತ್ತದೆ ಮತ್ತು ನರ್ಸ್ ಆಗಿ ಕೆಲಸ ಮಾಡಲು ಆದ್ಯತೆ ನೀಡುವವರು ಔಇಖಿ ಪರೀಕ್ಷೆಯನ್ನು ಕಡ್ಡಾಯವಾಗಿ ಪೂರ್ಣಗೊಳಿಸಬೇಕಾಗುತ್ತದೆ ಎಂದು ಜಾರ್ಜ್ ಹೇಳಿದರು.
ಕೊಚ್ಚಿನ್ ಅಂತರಾಷ್ಟ್ರೀಯ ಭಾಷಾ ಅಕಾಡೆಮಿಯ ಒಂದು ವೈಶಿಷ್ಟ್ಯವೆಂದರೆ ಅದು ನೀಡುವ ಎಲ್ಲಾ ಕೋರ್ಸ್ ಗಳಲ್ಲಿ ಸುಮಾರು ನೂರಕ್ಕೆ ನೂರರಷ್ಟು ಫಲಿತಾಂಶವನ್ನು ಸಾಧಿಸಿದೆ ಮತ್ತು ಕೊಚ್ಚಿನ್ ಅಂತರಾಷ್ಟ್ರೀಯ ಭಾಷಾ ಅಕಾಡೆಮಿಯ ತಜ್ಞಶಿಕ್ಷಕರು ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಿಗೆ ಭೇಟಿ ನೀಡಿ ತರಗತಿಗಳು ಮತ್ತು ಪರೀಕ್ಷೆಗಳನ್ನು ನಡೆಸುವುದರೊಂದಿಗೆ ಈ ಕೋರ್ಸ್ ಗಳನ್ನು ಆಫ್ ಲೈನ್‌ನಲ್ಲಿ ನೀಡಲಾಗುತ್ತದೆ. ಕರ್ನಾಟಕ ಮತ್ತು ಕೇರಳದ ಅನೇಕ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು ತಮ್ಮ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕೊಚ್ಚಿನ್ ಅಂತರಾಷ್ಟ್ರೀಯ ಭಾಷಾ ಅಕಾಡೆಮಿ ನೀಡುವ ಕೋರ್ಸ್ ಗಳನ್ನು ಪರಿಚಯಿಸಿವೆ.
ಈ ಚರ್ಚೆಯಲ್ಲಿ ಇಂಗ್ಲೀಷ್ ವಿಭಾಗದ ಮುಖ್ಯಸ್ಥ ಡಾ.ಎಸ್.ಎಸ್.ಪಾಟೀಲ್ ನೇತೃತ್ವದ ಬೋಧನಾ ಸಿಬ್ಬಂದಿ ಕೂಡ ಈ ಸಭೆಯಲ್ಲಿ ಹಾಜರಿದ್ದರು.