ಶಹಾಬಾದ್ | ಭಂಕೂರ ಗ್ರಾಮದಲ್ಲಿ ಡಾ.ಅಂಬೇಡ್ಕರ್ ಜಯಂತಿ ಆಚರಣೆ
Update: 2025-04-14 19:27 IST
ಕಲಬುರಗಿ : ಶಹಾಬಾದ್ ತಾಲ್ಲೂಕಿನ ಭಂಕೂರ ಗ್ರಾಮದಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರ ರವರ 134ನೇ ಜಯಂತಿಯನ್ನು ಆಚರಿಸಲಾಯಿತು.
ಗ್ರಾ. ಪಂ ಅಧ್ಯಕ್ಷ ಶರಣಬಸಪ್ಪ ಧನ್ನಾ ಮತ್ತು ಜಯಂತ್ಯೋತ್ಸವ ಸಮಿತಿ ಗೌರವಾಧ್ಯಕ್ಷ ಸುರೇಶ ಮೆಂಗನ ಅವರು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಪುಷ್ಪ ನಮನ ಸಲ್ಲಿಸಿದರು.
ಈ ವೇಳೆ ಪಿಡಿಓ ಮಹಾದೇವ ದಾಮಾ ಮತ್ತು ಮೌಲಾನಾ ಶಬ್ಬೀರ ಪಟೇಲ, ಮಲ್ಲಿಕಾರ್ಜುನ ಸಿರಗೊಂಡ ಮಾತನಾಡಿದರು.
ಈ ಸಂದರ್ಭದಲ್ಲಿ ಭರತ ಧನ್ನಾ, ಭೀಮಯ್ಯ ಗುತ್ತೇದಾರ್, ಶಂಕರ ಜಾನಾ, ಗ್ರಾ. ಪಂ ಸದಸ್ಯರಾದ ಶಿವಯೋಗಿ ಬಣ್ಣೇಕರ, ಮಹ್ಮದ ಜಾಕೀರ, ಶಕೀಲ ಪಟೇಲ, ಮಲ್ಲಿಕಾರ್ಜುನ ಧರಿ, ಗಂಗಾರಾಮ ರಾಠೋಡ, ಯಶ್ವಂತ ಚಹ್ವಾಣ, ವೀಣಾ ಯಲಗೋಡ, ಪ್ರದೀಪ ಸರಡಗಿ, ತೇಜಸ್ ಧನ್ನಾ, ಸಿದ್ದಲಿಂಗ ಸಿರಗೊಂಡ, ಧನಲಕ್ಷ್ಮಿ ಗುಜ್ಜನ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.