ಕಲಬುರಗಿ | ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ
Update: 2025-07-17 15:28 IST
ಕಲಬುರಗಿ: ಕರ್ನಾಟಕ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆಯ ಜಿಲ್ಲಾ ಘಟಕದ ಸಂಘಟನಾ ಕಾರ್ಯದರ್ಶಿಯಾಗಿ ಅಣವೀರಪ್ಪಾ ಎಸ್. ಯಾಕಾಪೂರ, ಸಿದ್ದಯ್ಯ ಆರ್.ಮಠ ಹಾಗೂ ನಿರ್ದೇಶಕರಾಗಿ ಸಿದ್ದಣ್ಣಾ ಪೂಜಾರಿ ಅವರನ್ನು ನಾಮ ನಿರ್ದೇಶನ ಮಾಡಿ, ಅವರಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾದ ಬಸವರಾಜ ಬಳೂಂಡಗಿ ಅವರು ಪ್ರಮಾಣ ಪತ್ರ ನೀಡಿ ಆದೇಶ ಹೊರಡಿಸಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ಸರ್ಕಾರಿ ನೌಕರರ ಸಂಘ ಕಾರ್ಯಾಧ್ಯಕ್ಷ ಚಂದ್ರಕಾಂತ್ ಏರಿ, ರಾಜ್ಯ ಪರಿಷತ್ ಸದಸ್ಯರಾದ ಧರ್ಮರಾಜ ಜವಳಿ, ಉಪಾಧ್ಯಕ್ಷರಾದ ವೀರಭದ್ರಯ್ಯ ಮಠ್, ಹಿರಿಯ ಉಪಾಧ್ಯಕ್ಷರಾದ ಎಮ್.ಬಿ.ಪಾಟೀಲ್, ಉಪಾಧ್ಯಕ್ಷರಾದ ಸಂತೋಷ್, ನ್ಯಾಯಾಂಗ ಇಲಾಖಾ ನೌಕರರ ಸಂಘದ ಅಧ್ಯಕ್ಷರು ಹಾಗೂ ಸರ್ಕಾರಿ ನೌಕರರ ಸಂಘದ ನಿರ್ದೇಶಕ ಸುನಿಲಕುಮಾರ್ ಚಾಂದೆ, ನ್ಯಾಯಾಂಗ ಇಲಾಖಾ ನೌಕರರ ಸಂಘದ ನಿರ್ದೇಶಕ ಗುರುನಾಥ್ ಬುಳ್ಳಾ ಇದ್ದರು.