×
Ad

ಹೆಸರು, ಉದ್ದು, ಸೂರ್ಯಕಾಂತಿ, ಸೋಯಾಬಿನ್ ಖರೀದಿಗೆ ಅವಧಿ ವಿಸ್ತರಣೆ: ಸಚಿವ ಪ್ರಿಯಾಂಕ್ ಖರ್ಗೆ

Update: 2026-01-01 16:45 IST

ಸಚಿವ ಪ್ರಿಯಾಂಕ್ ಖರ್ಗೆ (Photo: PTI)

ಕಲಬುರಗಿ : ಹೆಸರು ಕಾಳು, ಉದ್ದಿನ ಕಾಳು, ಸೂರ್ಯಕಾಂತಿ ಹಾಗೂ ಸೋಯಾಬಿನ್ ಖರೀದಿ ಅವಧಿಯನ್ನು ಸರ್ಕಾರ ವಿಸ್ತರಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, 2025–26ನೇ ಸಾಲಿನ ಸರ್ಕಾರದ ಬೆಂಬಲ ಬೆಲೆ (MSP) ಯೋಜನೆಯಡಿ ಮುಂಗಾರು ಹಂಗಾಮಿನ ಎಫ್‌.ಎ.ಕ್ಯೂ (FAQ) ಗುಣಮಟ್ಟದ ಹೆಸರು ಕಾಳು, ಉದ್ದಿನ ಕಾಳು ಮತ್ತು ಸೂರ್ಯಕಾಂತಿ ಖರೀದಿಗೆ 2025ರ ಸೆಪ್ಟೆಂಬರ್ 25ರ ವರೆಗೆ ಹಾಗೂ ಸೋಯಾಬಿನ್ ಖರೀದಿಗೆ ಸೆಪ್ಟೆಂಬರ್ 29ರ ವರೆಗೆ ಆದೇಶ ಹೊರಡಿಸಲಾಗಿತ್ತು ಎಂದು ವಿವರಿಸಿದರು.

ಇದೀಗ, ಸರ್ಕಾರದ 2025ರ ಡಿ.5ರ ಆದೇಶದನ್ವಯ ರೈತರಿಂದ ಉತ್ಪನ್ನ ಖರೀದಿಗೆ ನಿಗದಿಪಡಿಸಿದ್ದ ಗರಿಷ್ಠ ಮಿತಿಯನ್ನು ತೆರವುಗೊಳಿಸಲಾಗಿದ್ದು, FRUITS ತಂತ್ರಾಂಶದಲ್ಲಿ ಲಭ್ಯವಿರುವ ರೈತರ ಬೆಳೆ ಮಾಹಿತಿಯನ್ನು ಆಧರಿಸಿ ಎಕರೆಗೆ ಅನುಗುಣವಾಗಿ ಖರೀದಿಸಲು ಸೂಚಿಸಲಾಗಿದೆ.

ಅಲ್ಲದೆ, 2025ರ ಡಿ.31ರ ಸರ್ಕಾರದ ಆದೇಶದಂತೆ, ಮುಂಗಾರು ಹಂಗಾಮಿನ ಎಫ್‌.ಎ.ಕ್ಯೂ (FAQ) ಗುಣಮಟ್ಟದ ಹೆಸರು ಕಾಳು, ಉದ್ದಿನ ಕಾಳು, ಸೂರ್ಯಕಾಂತಿ ಹಾಗೂ ಸೋಯಾಬಿನ್ ಮಾರಾಟಕ್ಕಾಗಿ ಈಗಾಗಲೇ ನೊಂದಾಯಿಸಿಕೊಂಡಿರುವ ರೈತರಿಗೆ ಖರೀದಿ ಅವಧಿಯನ್ನು ಮುಂದುವರಿಸಿ ವಿಸ್ತರಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ವಿಸ್ತರಿಸಲಾದ ಖರೀದಿ ಅವಧಿ ಮತ್ತು ಬೆಂಬಲ ಬೆಲೆ ವಿವರ:

ಹೆಸರು ಕಾಳು- ನಿಗದಿಪಡಿಸಿದ ದರ: 8,768 ರೂ. ಹಾಗೂ ಅಂತಿಮ ದಿನಾಂಕ : 22-01-2026.

ಉದ್ದಿನ ಕಾಳು- ನಿಗದಿಪಡಿಸಿದ ದರ: 7,800 ರೂ. ಹಾಗೂ ಅಂತಿಮ ಅಂತಿಮ ದಿನಾಂಕ: 22-01-26

ಸೂರ್ಯಕಾಂತಿ-ನಿಗದಿಪಡಿಸಿದ ದರ: 7,721- ಹಾಗೂ ಅಂತಿಮ ಅಂತಿಮ ದಿನಾಂಕ: 22-01-26

ಸೋಯಾಬೀನ್- ನಿಗದಿಪಡಿಸಿದ ದರ: 5,328- ಹಾಗೂ ಅಂತಿಮ ಅಂತಿಮ ದಿನಾಂಕ : 26-01-26

ಜಿಲ್ಲೆಯ ರೈತ ಭಾಂದವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು. ತಮ್ಮ ಸಮೀಪದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು (PACS) ಹಾಗೂ ಎಫ್‌ಪಿಒ (FPO)ಗಳಿಗೆ ಭೇಟಿ ನೀಡಿ ನಿಗದಿತ ಅವಧಿಯೊಳಗೆ ಹೆಸರು ಕಾಳು, ಉದ್ದಿನ ಕಾಳು, ಸೂರ್ಯಕಾಂತಿ ಹಾಗೂ ಸೋಯಾಬಿನ್ ಮಾರಾಟ ಮಾಡುವಂತೆ ಸಚಿವ ಪ್ರಿಯಾಂಕ್ ಖರ್ಗೆ ಮನವಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News