×
Ad

ಅಭಿವೃದ್ಧಿಯ ಹೆಸರಿನಲ್ಲಿ ಆಳಂದ ಶಾಸಕರಿಂದ ಲೂಟಿ : ಮಾಜಿ ಶಾಸಕ ಸುಭಾಷ ಗುತ್ತೇದಾರ್‌ ಆರೋಪ

Update: 2025-07-22 21:42 IST

ಕಲಬುರಗಿ: ಆಳಂದ ಕ್ಷೇತ್ರದಲ್ಲಿ ಅಭಿವೃದ್ಧಿ ಎಂಬ ಭಾಷಣದ ಸರಕನ್ನು ಇಟ್ಟುಕೊಂಡು ಶಾಸಕ ಬಿ.ಆರ್.ಪಾಟೀಲ ಮತ್ತು ಅವರ ಬೆಂಬಲಿಗರು ಲೂಟಿಗೆ ಇಳಿದಿದ್ದಾರೆ ಎಂದು ಮಾಜಿ ಶಾಸಕ ಸುಭಾಷ ಗುತ್ತೇದಾರ ಅವರು ಆರೋಪಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಪಾಟೀಲ್‌ ಅವರು ಅಭಿವೃದ್ಧಿಯ ವಿರೋಧಿ ಎಂದು ಸ್ವಪಕ್ಷದ ಅನೇಕ ಸಚಿವ, ಶಾಸಕರೇ ಹೇಳುತ್ತಿದ್ದಾರೆ. ಇದಕ್ಕಿಂತ ಮತ್ತೊಂದು ಉದಾಹರಣೆ ಬೇಕೆ? ಎಂದು ಹೇಳಿದರು.

ಇವರು ಅಧಿಕಾರಕ್ಕೆ ಬಂದು ಎರಡುವರೆ ವರ್ಷದಲ್ಲಿ ಆಳಂದ ಮತಕ್ಷೇತ್ರಕ್ಕೆ ಸರ್ಕಾರದಿಂದ ತಂದಿರುವ ಅನುದಾನದ ಕುರಿತು ಶ್ವೇತ ಪತ್ರ ಹೊರಡಿಸಲಿ ಎಂದು ಸವಾಲು ಹಾಕಿದರು.

ರೈತರ ದೀರ್ಘಕಾಲಿಕ ಸಮಸ್ಯೆಯಾದ ಹೊಲಗಳಿಗೆ ಹೋಗುವ ರಸ್ತೆಯನ್ನು ನಿರ್ಮಾಣ ಮಾಡಲು ಮುಂದಾದಾಗ ಅದಕ್ಕೆ ತಡೆಯೊಡ್ಡಿದವರು ಯಾರು?. ವಿವಿಧ ಗ್ರಾಮಗಳಿಗೆ ಮಂಜೂರಾದ ಸ್ಮಾರ್ಟ್ ಸ್ಕೂಲ್ ಯೋಜನೆಗಳನ್ನು ಬದಲಾಯಿಸಿದ್ದು ಏಕೆ?. ಆಳಂದ ತಾಲೂಕಿಗೆ ಐಟಿಐ ಕಾಲೇಜು ಮಂಜೂರಿ ಮಾಡಿಸಿ ಟಾಟಾ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡು ಕೌಶಲ್ಯ ಕೇಂದ್ರ ಸ್ಥಾಪಿಸಲು ಮುಂದಾದಾಗ ಅದಕ್ಕೆ ತಡೆಯೊಡ್ಡಿದವರು ಪಾಟೀಲರೆ ಎಂದು ಅವರು ಕಿಡಿಕಾರಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಳಂದ ತಾಲೂಕಿಗೆ ಮಂಜೂರಾದ ಕೆರೆಗಳನ್ನು ಬದಲಾಯಿಸಿದ್ದು ಏಕೆ?. ಕೆರೆ ಕಾಮಗಾರಿಗಳನ್ನು ಬದಲಾಯಿಸಿ ನಾಲಾ ಹೂಳೆತ್ತುವುದು ಹಾಗೂ ನಾಲಾ ಸುಲಿಯುವ ಕಾಮಗಾರಿ ಮಾಡುತ್ತಿರುವುದು ಯಾಕಾಗಿ?. ಒಂದು ಕೆರೆ ಕಟ್ಟಿದರೆ ಅದು ನೂರಾರು ವರ್ಷ ಬಾಳುತ್ತದೆ ಅದರಿಂದ ನೂರಾರು ಏಕರೆಗೆ ನೀರಾವರಿ ಲಭಿಸುತ್ತದೆ. ಆದರೂ ತಾವು ಇದರ ಬಗ್ಗೆ ಮುತುರ್ವಜಿ ವಹಿಸುವುದಿಲ್ಲ ಯಾಕೆ ಎಂದು ಪ್ರಶ್ನಿಸಿದ್ದಾರೆ.

ಕಳೆದ ಅವಧಿಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ 186 ಕೋಟಿ ರೂ. ಖರ್ಚು ಮಾಡಲಾಗಿದೆ. ಶಾಲೆಯ ಭೌತಿಕ ಪರಿಸರ ಉತ್ತಮವಾಗಿಸಲು ಮತಕ್ಷೇತ್ರದ ವ್ಯಾಪ್ತಿಯ ಗ್ರಾಮಗಳ ಶಾಲಾ ಕಾಲೇಜುಗಳ ತರಗತಿ ಕೋಣೆಗಳನ್ನು ನಿರ್ಮಾಣ ಮಾಡಲಾಗಿದೆ. ಶೌಚಾಲಯ, ಸ್ಮಾರ್ಟ್‌ ಕ್ಲಾಸ್ ಅಳವಡಿಕೆ, ಬೆಂಚ್, ಡೆಸ್ಕ್ ಪೂರೈಕೆ ಸೇರಿದಂತೆ ಅನೇಕ ಸಂಪನ್ಮೂಲ ಒದಗಿಸಲಾಗಿದೆ. ಐತಿಹಾಸಿಕ ಎನ್ನುವಂತೆ 400 ತರಗತಿ ಕೋಣೆಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ ಈಗಿನ ಶಾಸಕ ಪಾಟೀಲ್‌ ಅವರು ವಾರಕ್ಕೊಮ್ಮೆ, ತಿಂಗಳಿಗೊಮ್ಮೆ ಕ್ಷೇತ್ರದ ಹಳ್ಳಿಗಳಲ್ಲಿ ಅಡಿಗಲ್ಲು ಉದ್ಘಾಟನೆ ಹೆಸರಿನಲ್ಲಿ ಸಂಚರಿಸಿ ಭಾಷಣ ಬೀಗಿಯುವುದನ್ನು ಬಿಟ್ಟು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಅವರು ಒತ್ತಾಯಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News