×
Ad

ಪತ್ರಕರ್ತರ ಹಿತ ಕಾಪಾಡಲು ಉಚಿತ ಬಸ್ ಪಾಸ್ ಯೋಜನೆ ಜಾರಿ : ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್

Update: 2025-07-19 21:16 IST

ಕಲಬುರಗಿ: ಪತ್ರಿಕಾ ರಂಗ ಕವಲು ದಾರಿಯಲ್ಲಿರುವುದು ಪ್ರಸ್ತುತ ಸ್ಥಿತಿಯಾಗಿದ್ದು, ಪತ್ರಕರ್ತರ ಹಿತ ಕಾಪಾಡುವಲ್ಲಿ ಸಿಎಂ ಸಿದ್ದರಾಮಯ್ಯನವರು ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಯೋಜನೆ ಜೊತೆಗೆ ಪತ್ರಕರ್ತರ ಆರೋಗ್ಯದ ದೃಷ್ಟಿಯಿಂದ ಆರೋಗ್ಯ ಸಂಜೀವಿನಿಯನ್ನು ಜಾರಿಗೆಗೊಳಿಸಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ದಿ ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್ ಹೇಳಿದರು.

ಸೇಡಂ ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ ಪತ್ರಿಕಾ ದಿನಾಚರಣೆ ಹಾಗೂ ಹಿರಿಯ ಪತ್ರಕರ್ತ ಬಿ.ಮಹಾದೇವಪ್ಪ ಸ್ಮರಣಾರ್ಥ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪತ್ರಕರ್ತರ ವೇತನದ ಬಗ್ಗೆ ಕಾನೂನಾತ್ಮಕ ಯೋಜನೆಯನ್ನು ರೂಪಿಸುವಲ್ಲಿ ಕೇಂದ್ರದ ಮಟ್ಟದಲ್ಲಿ ಕಾರ್ಯವಾಗಬೇಕಿದೆ ಎಂದು ಹೇಳಿದರು.

ಮಾಧ್ಯಮ ಸಂಸ್ಥೆಗಳು ಉಳ್ಳವರ ಮಾಲಿಕತ್ವದಲ್ಲಿರುವುದು ಜಾಗತೀಕರಣ ಮಟ್ಟದ ಬೆಳವಣಿಗೆಯಾಗಿದೆ. ಪತ್ರಿಕೆ ಓದುಗರ ಸಂಖ್ಯೆ ಹೆಚ್ಚುಸುವುದು ಪತ್ರಿಕಾ ಮಾಧ್ಯಮ ಸಂಸ್ಥೆಯವರ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಹಿರಿಯ ಪತ್ರಕರ್ತರಾದ ಟಿ.ವಿ ಶಿವಾನಂದನ್, ಸುಭಾಷ್ ಬಣಗಾರ ಅವರಿಗೆ ಬಿ.ಮಹಾದೇವಪ್ಪ ಸ್ಮರಣಾರ್ಥ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಈ ಸಂದರ್ಭದಲ್ಲಿ ತ್ರಿಮೂರ್ತಿ ಶಿವಾಚಾರ್ಯರು, ಬಸಮ್ಮ ಬಿ.ಮಹದೇವಪ್ಪ, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಬುರಾವ್ ಯಡ್ರಾಮಿ, ಶಿವರಂಜನ್ ಸತ್ಯಂಪೇಟೆ, ಸಂಗಮನಾಥ ರೇವತಗಾಂವ್, ಶರಣು ಮಹಾಗಾಂವ ಸೇರಿದಂತೆ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು, ಹಿರಿಯ-ಕಿರಿಯ ಪತ್ರಕರ್ತರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News