ಕಡಗಂಚಿಯಲ್ಲಿ ಉಚಿತ ಆರೋಗ್ಯ ಶಿಬಿರ; 278 ಜನರಿಗೆ ತಪಾಸಣೆ, ಔಷಧ ವಿತರಣೆ
ಕಲಬುರಗಿ: ಆಳಂದ ನ ಸೆಂಟ್ ಮೇರಿ ಶಾಲೆಯಲ್ಲಿ ಕಾರ್ಮೆಲ್ ಜ್ಯೋತಿ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ನ ಘಟಕ ಸನ್ನಿಧಿ ಸಮಾಜ ಸೇವಾ ಕೇಂದ್ರ ಕಡಗಂಚಿ ಮತ್ತು ಸುಜಾನಿ ತಾಯಿ ಮತ್ತು ಶಿಶುವಿನ ಆಸ್ಪತ್ರೆ ಕಲಬುರಗಿ ಇವರ ಸಹಯೋಗದಲ್ಲಿ ಉಚಿತ ಆರೋಗ್ಯ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.
ಶಿಬಿರದ ಉದ್ದೇಶ ಆರೋಗ್ಯ ಜಾಗೃತಿಯನ್ನು ಹೆಚ್ಚಿಸುವುದು ಮತ್ತು ವಿದ್ಯಾರ್ಥಿಗಳಿಗೆ ಅಗತ್ಯವಿರುವ ವೈದ್ಯಕೀಯ ಸೇವೆಗಳನ್ನು ಒದಗಿಸುವುದಾಗಿತ್ತು. ಕಾರ್ಯಕ್ರಮವನ್ನು ಕಾರ್ಮೆಲ್ ಜ್ಯೋತಿ ಟ್ರಸ್ಟ್ನ ಕಾರ್ಯದರ್ಶಿ ಫಾದರ್ ವಿಲಿಯಂ ಮಕ್ಕಳಿಗೆ ಆರೋಗ್ಯದ ಮಹತ್ವ ಕುರಿತು ಸಂದೇಶ ನೀಡುವ ಮೂಲಕ ಉದ್ಘಾಟಿಸಿದರು.
ಫಾದರ್ ಬಾಪು, ಸೆಂಟ್ ಮೇರಿ ಶಾಲೆಯ ವ್ಯವಸ್ಥಾಪಕರು, ಪಾಲಕರಿಗೆ ಉತ್ತಮ ಆಹಾರ ಸೇವನೆ ಮತ್ತು ಮಕ್ಕಳಲ್ಲಿ ಜಂಕ್ ಫುಡ್ ಸೇವನೆ ತಪ್ಪಿಸುವ ಪ್ರಾಮುಖ್ಯತೆಯನ್ನು ವಿವರಿಸಿದರು. ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಜುಲಿಯಾನ ಕಾರ್ಯಕ್ರಮದ ಯಶಸ್ಸಿಗೆ ತಮ್ಮ ಸಹಕಾರ ನೀಡಿದರು.
ಶಿಬಿರದಲ್ಲಿ ಸುಜಾನಿ ಆಸ್ಪತ್ರೆಯ ಡಾ. ಸಾಕ್ಷಿ, ಡಾ. ನಭಿ ತಪಾಸಣೆ ನಡೆಸಿ ಅಗತ್ಯವಿದ್ದವರಿಗೆ ಉಚಿತ ಔಷಧಿಗಳನ್ನು ವಿತರಿಸಿದರು. ಕೊನೆಯದಾಗಿ, ಶ್ರೀ ವೆಂಕಟೇಶ್ ಮಕ್ಕಳ ಆರೈಕೆಯ ಕುರಿತು ಪಾಲಕರಿಗೆ ಅಮೂಲ್ಯ ಸಲಹೆಗಳನ್ನು ನೀಡಿದರು.
ಈ ಶಿಬಿರದಲ್ಲಿ 210 ಮಕ್ಕಳು, 68 ಮಹಿಳೆಯರು ಸೇರಿ ಒಟ್ಟು 278 ಜನರು ಭಾಗವಹಿಸಿ ಶಿಬಿರದ ಸದುಪಯೋಗವನ್ನು ಪಡೆದರು. ಶಿಬಿರದ ಯಶಸ್ಸಿಗೆ ಬ್ರದರ್ ಮೆಲ್‌ರಿಕ್, ಸಿಸ್ಟರ್ ತೇರೇಸಿಯಾ, ಸಿಸ್ಟರ್ ರೋಸಲೀನ್ ಮತ್ತು ಸಿಬ್ಬಂದಿ ವರ್ಗದವರ ಸಹಕಾರ ಮಹತ್ವಪೂರ್ಣವಾಗಿತ್ತು.
ಆರೋಗ್ಯ ತಪಾಸಣೆ ಮತ್ತು ಔಷಧ ವಿತರಣೆಯಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಮತ್ತು ಪಾಲಕರಲ್ಲಿ ಆರೋಗ್ಯದ ಕುರಿತು ಸಕಾರಾತ್ಮಕ ಮೆಚ್ಚುಗೆ ಮೂಡಿಸಿವೆ.