ಕಲಬುರಗಿ ಕೇಂದ್ರ ಕಾರಾಗೃಹದ ಕೈದಿಗಳಿಗೆ ಉಚಿತ ಕಾನೂನಿನ ಅರಿವು, ನೆರವು ಕಾರ್ಯಕ್ರಮ
ಕಲಬುರಗಿ : ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮತ್ತು ಕೇಂದ್ರ ಕಾರಾಗೃಹದ ಸಹಯೋಗದೊಂದಿಗೆ ಶಿಕ್ಷಾ ಮತ್ತು ವಿಚಾರಣಾ ಕೈದಿಗಳಿಗೆ ವಿಶ್ವ ಸಾಮಾಜಿಕ ನ್ಯಾಯ ದಿನದ ಪ್ರಯುಕ್ತ, ಕಾನೂನಿನ ಅರಿವು ಮತ್ತು ನೆರವು ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿ ಹಾಗೂ ಉದ್ಘಾಟಕರಾಗಿ ಆಗಮಿಸಿದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಕಾರ್ಯದರ್ಶಿ ಹಾಗೂ ನ್ಯಾಯಾಧೀಶರಾದ ಶ್ರೀನಿವಾಸ ನವಲೆ ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು 70ರ ದಶಕದಲ್ಲಿ ಭೂ ಸುಧಾರಣೆ ಕಾಯ್ದೆ ಅಡಿಯಲ್ಲಿ ಉಳ್ಳುವನೆ ಭೂ ಒಡೆಯ ಸುಮಾರು ವರ್ಷಗಳಿಂದ ಬೇರೆಯವರ ಹೊಲದಲ್ಲಿ ಬೇಸಾಯ ಮಾಡುವರಿಗೆ ಆ ಹೊಲದ ಮಾಲಿಕತ್ವವನ್ನ ನೀಡಲಾಗಿತ್ತು.
ಅದರ ಸದುಪಯೋಗವನ್ನು ಕೆಲವು ಜನ ತಗೆದುಕೋಂಡ ಶ್ರೀಮಂತರಾದರು ಉಳಿದ ಕೆಲ ಜನ ದೂರಪಯೋಗ ಪಡಿಸಿಕೊಂಡರು ಬರಬರುತ್ತಾ ಸಾಮಾಜಿಕ ನ್ಯಾಯದಲ್ಲಿ ಬದಲಾವಣೆ ತರುತ್ತಾ ಪ್ರತಿ ಒಬ್ಬರಿಗೂ ಸಾಮಾಜಿಕವಾಗಿ ಆರ್ಥಿಕವಾಗಿ ಸಾಮಾನವಾದ ಅವಕಾಶವದ ಪರಿಕಲ್ಪನೆಯನ್ನು ನೀಡಿದ್ದು, ಹೆಣ್ಣು ಮಕ್ಕಳಿಗೂ ಕೂಡ ಸಾಮಾಜಿಕವಾಗಿ ನ್ಯಾಯ ದೊರಕಿಸಿ ಕೊಡಲಾಗುತ್ತಿದೆ ಎಂದರು.
ಪ್ರತಿಯೊಬ್ಬ ಬಂದಿಗಳೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಉಚಿತವಾಗಿ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು, ಯಾವ ಬಂದಿಗೆ ವಕೀಲರನ್ನು ನೇಮಿಸುವ ಆರ್ಥಿಕವಾಗಿ ಶಕ್ತಿ ಇಲ್ಲವೋ ಅಂತಹ ಬಂದಿಗಳಿಗೆ ನಾವುಗಳು ಉಚಿತ ವಕೀಲರನ್ನು ಒದಗಿಸಿಕೊಡುತ್ತೇವೆ. ಆರ್ಥಿಕವಾಗಿ ಶಕ್ತಿ ಇಲ್ಲದಿರುವ ಕಾರಾಗೃಹದಲ್ಲಿರುವ ಬಂದಿಗಳಿಗೆ ಜಾಮೀನು ದೊರೆತ ಅಪರಾಧ ಪ್ರಕರಣಗಳಲ್ಲಿ ಜಾಮೀನುದಾರರನ್ನು ಒದಗಿಸಲು ಸಾದ್ಯವಾಗದ ಹಿನ್ನೆಲೆಯಲ್ಲಿ ಯುಟಿಆರ್‍ಸಿ ಕಮೀಟಿ ವತಿಯಿಂದ ನ್ಯಾಯಾಲಯಗಳು ವಿಧಿಸಿರುವ ಷರತ್ತು ಮತ್ತು ನಿಬಂಧನೆಗಳನ್ನು ಸಡಿಲಗೊಳಿಸಲು ಪ್ರಯತ್ನಿಸುತ್ತೇವೆ. ಕೆಲವೊಂದು ಪ್ರಕರಣಗಳಲ್ಲಿ ಸ್ವಯಂ ಮುಚ್ಚಳಿಕೆ ಪತ್ರದ ಮುಖಾಂತರ ಬಿಡುಗಡೆ ಮಾಡಲು ಶಿಫಾರಸ್ಸು ಮಾಡುತ್ತೇವೆ ಎಂದು ತಿಳಿಸಿದರು.
ಕಾರಾಗೃಹ ಇಲಾಖೆಯು ಬಂದಿಗಳ ಸುಧಾರಣೆಗೆ 1987ರ ಸೇವಾ ಕಾಯ್ದೆ ಅಡಿಯಲ್ಲಿ ಎನ್.ಎಲ್.ಎಸ್.ಎ , ಕೆ.ಎಸ್.ಎಲ್.ಎಸ್.ಎ, ಡಿ.ಎಲ್ ಎಸ್.ಎ ಅಡಿಯಲ್ಲಿ ಸೇವೆಯನ್ನು ಒದಗಿಸಲಾಗುತ್ತಿದೆ. ಅದರ ಸದುಪಯೋಗವನ್ನು ಪಡೆಯಲು ಹೇಳಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಮುಖ್ಯ ಅಧೀಕ್ಷಕರಾದ ಡಾ.ಅನಿತಾ ಆರ್. ಮಾತನಾಡಿ ವಿಶ್ವ ಸಾಮಾಜಿಕ ನ್ಯಾಯ ದಿನದ ಅಡಿಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧೀಕಾರದ ವತಿಯಿಂದ ಸಿಗುವ ಸೌಲಭ್ಯಗಳನ್ನು ನಿಮಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು, ಅಲ್ಲದೆ ತಾವುಗಳು ಒಳ್ಳೆಯ ನಡತೆಯೊಂದಿಗೆ ಉತ್ತಮ ಸಹಕಾರ ನೀಡಿದ್ದಲ್ಲಿ ಕಾನೂನಾತ್ಮಕವಾಗಿ ತಮಗೆ ದೊರೆಯುವ ಸೌಲಭ್ಯಗಳನು ನೀಡಲಾಗುವುದು. ಅವುಗಳ ಲಾಭ ಪಡೆದು ಆದಷ್ಟು ಬೇಗ ಇಲ್ಲಿಂದ ಬಿಡುಗಡೆ ಹೊಂದಿ ಸಮಾಜದಲ್ಲಿ ಒಳ್ಳೆಯ ಸಮಾಜಮುಖಿಯಾಗಿ ಕೆಲಸವನ್ನು ನಿರ್ವಹಿಸುತ್ತಾ ಕುಟುಂಬದವರೊಡನೆ ಉತ್ತಮ ಬಾಳ್ವೆಯನ್ನು ನಡೆಸುವಂತೆ ವಿಶ್ವಾಸ ಮೂಡಿಸಿದರು.
ಈ ಸಂಸ್ಥೆಯ ಪ್ರಭಾರಿ ಅಧೀಕ್ಷಕರಾದ ಬಿ.ಸುರೇಶ್ ಸ್ವಾಗತಿಸಿದರು. ಸಹಾಯಕ ಅಧೀಕ್ಷಕ ಚನ್ನಪ್ಪ, ಜೈಲರ್ ಗಳಾದ ಸುನಂದಾ ವಿ.ಆರ್., ಶ್ರೀಮಂತಗೌಡ್ ಪಾಟೀಲ್, ಸಿಬ್ಬಂದಿಗಳು ಹಾಗೂ ಬಂದಿಗಳು ಭಾಗವಹಿಸಿದ್ದರು. ಈ ಸಂಸ್ಥೆಯ ಶಿಕ್ಷಕರಾದ ನಾಗರಾಜ ಮೂಲಗೆ ನಿರೂಪಣೆ ಮತ್ತು ವಂದನಾರ್ಪಣೆ ಮಾಡಿದರು. ಶಿಕ್ಷಾಬಂದಿಯಿಂದ ವಿರೇಶ ಪ್ರಾರ್ಥನಾ ಗೀತೆಯನ್ನು ಹಾಡಿದರು.