×
Ad

ಮಾ.22ಕ್ಕೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ; ಮಹಿಳಾ ಕಣ್ಮಣಿ ಪ್ರಶಸ್ತಿ ಪ್ರದಾನ

Update: 2025-03-20 14:18 IST

ಕಲಬುರಗಿ: ತ್ರೀಶಾ ಎಜುಕೇಶನ್ ಚಾರಿಟೇಬಲ್ ಆ್ಯಂಡ್ ವೆಲ್ಫೇರ್ ಟ್ರಸ್ಟ್ ವತಿಯಿಂದ ಮಾ.22 ರಂದು ಸಂಜೆ 4.30ಕ್ಕೆ ನಗರದ ಕನ್ನಡ ಭವನದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 10 ಜನ ಮಹಿಳೆಯರಿಗೆ 'ಮಹಿಳಾ ಕಣ್ಮಣಿ' ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಟ್ರಸ್ಟನ್ ಅಧ್ಯಕ್ಷೆ ಅಶ್ವಿನಿ ಚವ್ಹಾಣ ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾನಗರ ಪಾಲಿಕೆ ಮಹಾಪೌರ ಯಲ್ಲಪ್ಪ ನಾಯ್ಕೋಡಿ ಕಾರ್ಯಕ್ರಮ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಶಾಸಕ ಅಲ್ಲಮಪ್ರಭು ಪಾಟೀಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ನಿತಿನ್ ವ್ಹಿ ಗುತ್ತೇದಾರ್, ಕಾಂಗ್ರೆಸ್ ಮುಖಂಡ ನೀಲಕಂಠರಾವ ಮೂಲಗೆ ಆಗಮಿಸುವರು ಎಂದರು.

ಮಹಿಳಾ ಕಣ್ಮಣಿ ಪ್ರಶಸ್ತಿಯನ್ನು ಲೋಕೋಪಯೋಗಿ ಇಲಾಖೆಯ ಅಧಿಕ್ಷಿಕ ಅಭಿಯಂತರರಾದ ಡಾ.ಸುರೇಶ ಶರ್ಮಾ ಪ್ರದಾನ ಮಾಡಲಿದ್ದು, ಪತ್ರಕರ್ತ ಡಾ.ಸುರೇಶ ಬಡಿಗೇರ್ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಹೊರಗುತ್ತಿಗೆದಾರರ ಸಂಘದ ರಾಜಾಧ್ಯಕ್ಷ ಭೀಮಶೆಟ್ಟೆಯಂಪಳ್ಳಿ, ಕ.ಸಾ.ಪ.ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ವಿಜಯಕುಮಾರ ಕಟ್ಟಿಮನಿ, ಶಿವಶರಣಪ್ಪ ಸಾವಳಗಿ, ಕರಬಸಮ್ಮ ಪೂಜಾರಿ, ಲಕ್ಷ್ಮೀದೇವಿ ದತ್ತಾತ್ರೇಯ ಪಾಟೀಲ್ ರೇವೂರ್, ಮಾಲಾ ಕಣ್ಣಿ ಆಗಮಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಬ್ರಹ್ಮವೇಣಿ ಪೋತೆ, ದಿವ್ಯಾ ಕಂದನಕರ್, ಸುನಂದ ರಾಠೋಡ್, ಲಕ್ಷ್ಮೀ ಚವ್ಹಾಣ, ಪಾರ್ವತಿ ಕೆಂಬಾವಿ ಸೇರಿದಂತೆ ಇತರರು ಇದ್ದರು.

 

'ಮಹಿಳಾ ಕಣ್ಮಣಿ' ಪ್ರಶಸ್ತಿ ಪ್ರದಾನ

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಯಶೋಧಾ ಕಟಕೆ, ಶೋಭಾ ಪಾಟೀಲ್, ಸಿಂಧುಮತಿ ಭೊಸ್ಲೆ, ಜ್ಯೋತಿ ಹಂಚನಾಳ, ಜ್ಯೋತಿ ಅಕ್ಷಯ, ಸವಿತಾ ಬಿ.ನಾಸಿ, ಸುನಿತಾ ಚೌವ್ಹಾಣ, ರೇಖಾ ಪಾಟೀಲ್, ಮಲ್ಲಮ್ಮ ಭೀಮರೆಡ್ಡಿ, ಜಯಶ್ರಿ ಸಾಯಬಣ್ಣ ಯಾದಗಿರಿ ಇವರಿಗೆ 'ಮಹಿಳಾ ಕಣ್ಮಣಿ' ಪ್ರಶಸ್ತಿ ನೀಡಿ ಗೌರವಿಸಲಾಗುವುದು

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News