ಜೇವರ್ಗಿ | ಅಮರಶಿಲ್ಪಿ ಜಕಣಾಚಾರ್ಯ ಜಯಂತೋತ್ಸವ
Update: 2026-01-02 20:52 IST
ಜೇವರ್ಗಿ: ಪಟ್ಟಣದ ಬುಟ್ನಾಳ ರಸ್ತೆಯ ಪಕ್ಕದಲ್ಲಿರುವ ನಾಟ್ಯಲೋಕ ಡ್ಯಾನ್ಸ್ ಅಕಾಡೆಮಿ ವತಿಯಿಂದ ಅಮರಶಿಲ್ಪಿ ಜಕಣಾಚಾರ್ಯ ಜಯಂತೋತ್ಸವ ಆಚರಿಸಲಾಯಿತು.
ವಿಶ್ವಕರ್ಮ ಸಮಾಜದ ಜಕಣಾಚಾರಿ ಜಯಂತಿಯ ಕುರಿತು ಸವಿಸ್ತಾರವಾಗಿ ಕರುಣಾಸಾಗರ ಪತ್ತಾರವರು ಮಾತನಾಡಿದರು. ವಿಶ್ವಕರ್ಮ ಸಮಾಜದ ಅಧ್ಯಕ್ಷರಾದ ಜಗದೀಶ್ ವಿಶ್ವಕರ್ಮ ಅವರು ಪೂಜೆಯನ್ನು ನೆರವೇರಿಸಿದರು.
ಅಕಾಡೆಮಿಯ ಮಾಸ್ಟರ್ ಗಳಾದ ಮೋಹನ್ ಬಡಿಗೇರ ಮಾಸ್ಟರ್ ಮತ್ತು ರಾಜು ಮಾಸ್ಟರ್ ಪ್ರಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪ್ರವೀಣ್ ಪತ್ತಾರ್,ರಮೇಶ್ ವಿಶ್ವಕರ್ಮ, ನಿಂಗರಾಜ ವಿಶ್ವಕರ್ಮ, ಮಂಜುನಾಥ ವಿಶ್ವಕರ್ಮ, ಸುಧಾಕರ್ ಪತ್ತಾರ, ಗಿರೀಶ ಪತ್ತಾರ, ಮಹಾಂತೇಶ ವಿಶ್ವಕರ್ಮ, ಗುಂಡಪ್ಪ ಪತ್ತಾರ, ವಿಜಯಕುಮಾರ್ ಪತ್ತಾರ, ಶರಣು ವಿಶ್ವಕರ್ಮ ಇದ್ದರು.