×
Ad

ಜೇವರ್ಗಿ | ಭೀಮಾ ಕೋರೆಗಾಂವ್‌ ವಿಜಯೋತ್ಸವ ಆಚರಣೆ

Update: 2026-01-02 20:39 IST

ಜೇವರ್ಗಿ : 30 ಸಾವಿರ ಪೇಶ್ವೆಗಳನ್ನು ಕೇವಲ 500 ಮಹಾರ್ ಸೈನಿಕರು ಸೋಲಿಸಿ ವಿಜಯಪತಾಕೆ ಹಾರಿಸಿದ ಐತಿಹಾಸಿಕ ದಿನವನ್ನು ಭೀಮಾ ಕೋರೆಗಾಂವ್ ವಿಜಯೋತ್ಸವವಾಗಿ ದೇಶಾದ್ಯಂತ ಆಚರಿಸಲಾಗುತ್ತಿದೆ. ಪೇಶ್ವೆಗಳ ಆಡಳಿತದಲ್ಲಿದ್ದ ಜಾತಿ, ಅಸ್ಪೃಶ್ಯತೆ ಹಾಗೂ ಮೇಲುಕೀಳು ವ್ಯವಸ್ಥೆಗಳ ವಿರುದ್ಧ ನಿಂತು ಮಾನವೀಯ ಮೌಲ್ಯಗಳಿಗಾಗಿ ಹೋರಾಡಿದ ಮಹಾರ್ ಸೈನಿಕರ ಧೈರ್ಯ, ಸಾಹಸ ಮತ್ತು ಕೆಚ್ಚೆದೆಯ ಹೋರಾಟ ಮೆಚ್ಚುವಂತದ್ದು ಎಂದು ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಹೇಳಿದರು.

ಪಟ್ಟಣದ ಡಾ.ಅಂಬೇಡ್ಕರ್ ಪುತ್ಥಳಿ ಬಳಿ ಭೀಮಾ ಕೋರೆಗಾಂವ್ ವಿಜಯೋತ್ಸವ ತಾಲ್ಲೂಕು ಸಮಿತಿ ವತಿಯಿಂದ ಗುರುವಾರ ಆಯೋಜಿಸಿದ್ದ 208ನೇ ಶೌರ್ಯ ದಿನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿ.ಪಂ. ಮಾಜಿ ಸದಸ್ಯ ಶಾಂತಪ್ಪ ಕೂಡಲಗಿ ಮಾತನಾಡಿದರು. ಬಹುಜನ ಚಿಂತಕ ಅನಿಲ ಟೆಂಗಳಿ ಹಾಗೂ ನಿಜಲಿಂಗ ದೊಡ್ಡಮನಿ ಪಂಡಿತ ಮುದಗುಣಗಿ ಉಪನ್ಯಾಸ ನೀಡಿ, ಕೋರೆಗಾಂವ್ ಯುದ್ಧದ ಐತಿಹಾಸಿಕ ಮಹತ್ವ ಮತ್ತು ಅದರ ಸಾಮಾಜಿಕ ಸಂದೇಶವನ್ನು ವಿವರಿಸಿದರು.

ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಸಂತೋಷ ಚನ್ನೂರ, ರೇಣುಕಾ ಗಾಯಕವಾಡ, ಖಾಜಪ್ಪ ಮಯೂರ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಶೇಖರ ಹರನಾಳ, ಮಲ್ಲಣ್ಣ ಕೊಡಚಿ, ಜಗದೇವಿ ಜಟ್ನನಕರ, ಗ್ರಾಮ ಪಂಚಾಯತ್ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಹಾಗೂ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಅಧ್ಯಕ್ಷ ಮರೆಪ್ಪ ಬೇಗಾರ, ಡಾ. ಅಶೋಕ ದೊಡ್ಡಮನಿ ಸೇರಿದಂತೆ ಹಲವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಸಿದ್ದರಾಮ ಕಟ್ಟಿ, ಮಾಪಣ್ಣ ಕಟ್ಟಿ, ಗ್ಯಾರಂಟಿ ಸಮಿತಿ ಸದಸ್ಯ ಶರಣಬಸವಪ್ಪ ರೇವನೂರ, ದೇವೇಂದ್ರ ಮುದವಾಳ, ಬೆಣ್ಣೆಪ್ಪ ಕೊಂಬಿನ, ಪ್ರಭಾಕರ ಸಾಗರ್, ಪುರಸಭೆ ಸದಸ್ಯ ಶಿವುಬಾಯಿ ಕೊಂಬಿನ, ಗುಂಡಪ್ಪ ಜಡಗಿ, ಸಂಗಣ್ಣ ಗುಡುರ್, ಸಂಗಣ್ಣ ಕಟ್ಟಿ ಸಂಗಾವಿ, ಶರಣಬಸವಪ್ಪ, ರಮೇಶ್ ಧನಕರ, ಮೌನೇಶ್ ಹಂಗಾರಗಿ, ಮಾರುತಿ ಕನ್ನಾ, ವಿಜಯಕುಮಾರ ಜಟ್ನಾಕರ, ಆನಂದ ಕೊಂಬಿನ, ಮಿತೇಶ್ ಡುಗನಕರ್, ಮಿಲಿಂದ್ ಸಾಗರ, ವಿಶ್ವ ಬಾರಿಗಿಡ, ಶ್ರೀಮಂತ ಕಿಲ್ಲದಾರ, ಭಾಗಣ್ಣ ಕಟ್ಟಿ ಸೇರಿದಂತೆ ಅನೇಕ ಗಣ್ಯರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

ಯಶವಂತ ಬಡಿಗೇರ ಕ್ರಾಂತಿಗೀತೆ ಹಾಡಿದರು. ಸಿದ್ದು ಕೆರೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೂರ್ಯಕಾಂತ ಡುಗನಕರ್ ಸ್ವಾಗತಿಸಿದರು. ಶರಣಪ್ಪ ಬಡಿಗೇರ ನಿರೂಪಿಸಿದರು. ಶ್ರೀಹರಿ ಕರಕಿಹಳ್ಳಿ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News