ಜೇವರ್ಗಿ| ವಿದ್ಯುತ್ ತಗುಲಿ ಬಾಲಕ ಮೃತ್ಯು
Update: 2025-08-16 21:37 IST
ಆಕಾಶ ಭೀಮಾಶಂಕರ ವಡ್ಡರ್
ಕಲಬುರಗಿ: ವಿದ್ಯುತ್ ಲೈನ್ ತಗುಲಿ ಬಾಲಕನೋರ್ವ ಮೃತಪಟ್ಟಿರುವ ಘಟನೆ ಜೇವರ್ಗಿ ತಾಲ್ಲೂಕಿನ ನೆಲೋಗಿ ಗ್ರಾಮದಲ್ಲಿ ನಡೆದಿದೆ.
ಆಕಾಶ ಭೀಮಾಶಂಕರ ವಡ್ಡರ್ (16) ಮೃತಪಟ್ಟ ಬಾಲಕ ಎಂದು ಗುರುತಿಸಲಾಗಿದೆ.
ಆಕಾಶ ತನ್ನ ಸ್ನೇಹಿತರೊಂದಿಗೆ ಹುಣಸೆ ಮರ ಹತ್ತಿ ಹಣ್ಣು ಕೀಳಲು ಹೋಗಿದ್ದಾನೆ. ಮರದ ಮೇಲೆ ವಿದ್ಯುತ್ ಲೈನ್ ಹಾಯ್ದು ಹೋಗಿದ್ದು, ತಲೆಗೆ ವಿದ್ಯುತ್ ತಂತಿ ತಗುಲಿದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಈ ಕುರಿತು ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.