×
Ad

ಜೇವರ್ಗಿ | ಸಿದ್ಧರಾಮೇಶ್ವರರ ತತ್ವಾದರ್ಶ ಪಾಲಿಸಿ : ರವಿಚಂದ್ರ ಗುತ್ತೇದಾರ

Update: 2026-01-15 21:54 IST

ಜೇವರ್ಗಿ : ಶಿವಯೋಗಿ ಸಿದ್ದರಾಮೇಶ್ವರರ ಕಾಯಕ ತತ್ವಗಳು ಮತ್ತು ಆದರ್ಶಗಳು ಕೇವಲ ಒಂದು ಸಮುದಾಯಕ್ಕೆ ಸೀಮಿತವಲ್ಲ, ಅವು ಇಡೀ ಸಮಾಜಕ್ಕೆ ದಾರಿದೀಪವಾಗಿವೆ. ಪ್ರತಿಯೊಬ್ಬರೂ ಅವರ ಜೀವನ ಸಂದೇಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಭೋವಿ ಸಮಾಜದ ಮುಖಂಡ ರವಿಚಂದ್ರ ಗುತ್ತೇದಾರ್ ಹೇಳಿದರು.

ಪಟ್ಟಣದ ಮಿನಿ ವಿಧಾನ ಸೌಧದ ಕಚೇರಿ ಆವರಣದಲ್ಲಿ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 'ಶಿವಯೋಗಿ ಸಿದ್ದರಾಮೇಶ್ವರ ಜಯಂತಿ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಹಶೀಲ್ದಾರ್ ಮಲ್ಲಣ್ಣ ಯಲಗೋಡ, ಪುರಸಭೆ ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ತಾಪಂ ಇಒ ರವಿಚಂದ್ರರೆಡ್ಡಿ, ಎಪಿಎಂಸಿ ಕಾರ್ಯದರ್ಶಿ ಸುಮಂಗಲಾದೇವಿ ಹೂಗಾರ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸತೀಶ ಸಂಗನ್, ಪಶು ಇಲಾಖೆಯ ಸಹಾಯಕ ನಿರ್ದೇಶಕಿ ಡಾ.ಶೋಭಾ ಸಜ್ಜನ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಗುರುಶಾಂತಯ್ಯ ಗದ್ದಗಿಮಠ, ಸಂತೋಷ ಯಚಿ, ಸುರೇಖಾ ನಡಗೇರಿ, ಸಿದ್ದಣ್ಣ ಹುಲಕಲ್, ಭೀಮಾಶಂಕರ ಯಲಗೋಡ, ಶರಣು ಗುತ್ತೇದಾರ, ಮಲ್ಲಿಕಾರ್ಜುನ ದಂಡೂಲ್ಕರ್, ಸಾಯಬಣ್ಣ ಗುತ್ತೇದಾರ, ಭಗವಂತ್ರಾಯ ಬೆಣ್ಣೂರ, ಮೈಲಾರಿ ಗುಡೂರ, ಗಿರೀಶ್ ತುಂಬಗಿ, ರಾಜು ತಳವಾರ, ಸಂತೊಷ ಪೂಜಾರಿ ಗುಡೂರ, ಭೀಮರಾಯ ಖಾದ್ಯಾಪೂರ, ಸಾಯಬಣ್ಣ ಕಲ್ಯಾಣಕರ್, ಸಂತೋಷ ಸಂಗನ, ಬಾಪುಗೌಡ ಪಾಟೀಲ, ಗಂಗಾಧರ, ಮಕ್ಬೂಲ್ ಪಟೇಲ, ದಶರಥ ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News