×
Ad

ಕಾಳಗಿ | ಅಣವೀರಭದ್ರೇಶ್ವರ ಜಾತ್ರಾ ಮಹೋತ್ಸವ

Update: 2026-01-15 20:00 IST

ಕಾಳಗಿ : ಇಲ್ಲಿನ ಶ್ರೀ ಅಣವೀರಭದ್ರೇಶ್ವರ ಹಾಗೂ ಭದ್ರಕಾಳಿ ಕಲ್ಯಾಣ ಮಹೋತ್ಸವವು ಬುಧವಾರ ವಿಜೃಂಭಣೆಯಿಂದ ನೆರವೇರಿತು.

ಬೆಳಗ್ಗೆ 6 ಗಂಟೆಯಿಂದ 10.30 ರವರೆಗೆ ಸಾವಿರಾರು ಭಕ್ತರ ಸಾನ್ನಿಧ್ಯದಲ್ಲಿ ಮಹಾರುದ್ರಾಭಿಷೇಕ ಜರುಗಿತು. ಬಳಿಕ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

ಅನಂತರ ಶಿವಾನುಭವ ಚಿಂತನೆ ಹಾಗೂ ಧರ್ಮಸಭೆ ಜರುಗಿದ್ದು, ಸಂಜೆ 5.30ಕ್ಕೆ ಕಲ್ಯಾಣ ಮಹೋತ್ಸವ ಅತ್ಯಂತ ವೈಭವದಿಂದ ನೆರವೇರಿತು. ಕರ್ನಾಟಕದ ವಿವಿಧ ಜಿಲ್ಲೆಗಳೊಂದಿಗೆ ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದಿಂದಲೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.

ಈ ಸಂದರ್ಭದಲ್ಲಿ ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀ ಪ.ಬ್ರ. ರೇವಣಸಿದ್ಧ ಶಿವಾಚಾರ್ಯರು ಶ್ರೀನಿವಾಸ ಸರಡಗಿ, ನೀಲಕಂಠ ದೇವರು, ರಾಮಲಿಂಗ ರೆಡ್ಡಿ ದೇಶಮುಖ, ಶರಣಬಸಪ್ಪ ಮಮಶೆಟ್ಟಿ ಅವರು ಮಾತನಾಡಿದರು.

ಇದೇ ಸಂದರ್ಭದಲ್ಲಿ ಅಣ್ಣಾರಾವ ಪೆದ್ದಿ, ವೀರಣ್ಣ ಗಂಗಾಣಿ, ಡಾ.ಅನೀಲ ರಟಕಲ್, ನೀಲಕಂಠ ರಾವ್ ಪಾಟೀಲ್, ಸೋಮಣ್ಣ ಕುರಕೋಟಿ, ಮಹೇಶ ಪೆದ್ದಿ, ರಾಜಶೇಖರ ಗುಡುದಾ, ಅರ್ಚಕರಾದ ಗೌರಿಶಂಕರ ತೆಂಗಿನಮಠ, ರೇವಣಸಿದ್ಧಪ್ಪ ಕುರುಕೋಟಿ, ಸಂತೋಷ್ ಚಿದರಿ, ಜಗದೇವಪ್ಪ ಮಹಾಗಾಂವ, ಚಿಕ್ಕವೀರಪ್ಪ ಮಾಮಾ, ಮಲ್ಲಿಕಾರ್ಜುನ್ ಕುರಕೋಟಿ, ಮಗಳಪ್ಪ ಸರ್ ಚಿದರಿ, ನಾಗಣ್ಣ ಗಡ್ಡಿ, ರವಿ ಬಳಾ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಭಜಂತ್ರಿ ವೃಂದದಿಂದ ಕಾರ್ಯಕ್ರಮಕ್ಕೆ ಮೆರುಗು ನೀಡಲಾಯಿತು.

ರಟಕಲ್ ಪೊಲೀಸರು ಸೂಕ್ತ ಬಂದೋಬಸ್ತ್ ಒದಗಿಸಿದ್ದರು. ಇನ್ನೂ ಅನೇಕ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News