×
Ad

ಕಲಬುರಗಿ | ಸದೃಢ ಸಮಾಜ ನಿರ್ಮಿಸುವಲ್ಲಿ ಮಹಿಳಾ ಬರಹಗಾರರ ಪಾತ್ರ ಪ್ರಮುಖ : ರೋಷನಿ ಗೌಡ

ಸಂಕ್ರಾಂತಿ ಕಾವ್ಯ ಸಂಭ್ರಮ

Update: 2026-01-15 19:07 IST

ಕಲಬುರಗಿ: ಸದೃಢ ಸಮಾಜ ನಿರ್ಮಿಸುವಲ್ಲಿ ಮಹಿಳಾ ಬರಹಗಾರರ ಪಾತ್ರ ಪ್ರಮುಖವಾಗಿದೆ ಎಂದು ಅಖಿಲ ಕರ್ನಾಟಕ ರಾಜ್ಯ ಸರಕಾರಿ ಮಹಿಳಾ ನೌಕರರ ಸಂಘದ ರಾಜ್ಯಾಧ್ಯಕ್ಷೆ ರೋಷನಿ ಗೌಡ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಸಂಯುಕ್ತಾಶ್ರಯದಲ್ಲಿ ನಗರದ ಕನ್ನಡ ಭವನದ ಕಲಾ ಸೌಧದಲ್ಲಿ ಗುರುವಾರ ಆಯೋಜಿಸಿದ ಸಂಕ್ರಾoತಿ ಕಾವ್ಯ ಸಂಭ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕವಿಗೋಷ್ಠಿಯಿಂದ ಒಂದಾಗಿ ಬೆರೆಯುವ ಅವಕಾಶ ಸಿಗಲಿದೆ. ಆ ಮೂಲಕ ಭಾಷೆ ಮತ್ತು ಸಂಸ್ಕೃತಿ ಶ್ರೀಮಂತಗೊಳಿಸಲು ಸಾಧ್ಯ. ಖಡ್ಗದಿಂದ ಲೇಖನಿ ಮುಖ್ಯ. ಈ ಲೇಖನಿಯಿಂದಲೇ ನಾವು ಯುದ್ಧ ಗೆಲ್ಲಬಹುದು ಎಂದು ಅಭಿಪ್ರಾಯಪಟ್ಟರು.

ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಕಾವ್ಯ ನಮ್ಮ ಜೀವನದ ಪ್ರತಿಬಿಂಬವಾಗಿದೆ. ಅದು ನಮ್ಮ ಭಾವನೆಗಳು, ಅನುಭವಗಳು ಹಾಗೂ ಕನಸುಗಳನ್ನು ಶಬ್ದಗಳಲ್ಲಿ ಕಟ್ಟಿ ತೋರಿಸುತ್ತದೆ. ಕಾವ್ಯ ನಮಗೆ ಜೀವನದ ಅರ್ಥ ತಿಳಿಸಿಕೊಡುತ್ತದೆ ಎಂದರು.

ಚಿಂತಕ ಡಾ.ಗೌಸುದ್ದೀನ್ ತುಮಕೂರಕರ್ ಸಮಾರಂಭದ ಅಧ್ಯಕ್ಷತೆ ವಹಿಸಿ, ರನ್ನ, ಪೊನ್ನ, ಕುವೆಂಪು, ಬೇಂದ್ರೆ, ಹಿರಿಯರ ಕಾವ್ಯಗಳನ್ನು ಆಸ್ವಾದಿಸಬೇಕು. ಹೆಚ್ಚು ಅಧ್ಯಯನಶೀಲರಾಗಬೇಕು ಎಂದು ಹೇಳಿದರು.

ಜಿಲ್ಲಾ ಸರಕಾರಿ ಮಹಿಳಾ ನೌಕರರ ಸಂಘದ ಅಧ್ಯಕ್ಷೆ ರೇಣುಕಾ ಡಾಂಗೆ, ಕಸಾಪ ತಾಲೂಕಾಧ್ಯಕ್ಷೆ ಶಿವಲೀಲಾ ಕಲಗುರ್ಕಿ ಮಾತನಾಡಿದರು. ಜಿಲ್ಲಾ ಕಸಾಪ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ಸಿದ್ಧಲಿಂಗ ಬಾಳಿ, ಪ್ರೊ.ಬಿ.ಎ.ಪಾಟೀಲ, ಧರ್ಮರಾಜ ಜವಳಿ, ಮಲ್ಲಿಕಾರ್ಜುನ ಇಬ್ರಾಹಿಂಪುರ, ಸೈಯ್ಯದ್ ನಜಿರುದ್ದಿನ್ ಮುತ್ತವಲ್ಲಿ ವೇದಿಕೆ ಮೇಲಿದ್ದರು.

ಕವಿಗಳಾದ ಆರ್.ಎಚ್.ಪಾಟೀಲ, ಅಶ್ವಿನಿ ಎಂ ಪಾಟೀಲ, ಶಾರದಾ ಕಂದಗೂಳೆ, ಮಲ್ಲಮ್ಮ ಕಾಳಗಿ, ಪಲ್ಲವಿ ಕುಲಕರ್ಣಿ, ವಿಜಯಲಕ್ಷ್ಮಿ ಕೋಳಕೂರ, ರೂಪಾ ಪೂಜಾರಿ, ಕವಿತಾ ತುಪ್ಪದ, ಮಂಜುಳಾ ಎಂ ಪಾಟೀಲ, ಸ್ವಾತಿ ಬಿ ಕೋಬಾಳ, ವೆಂಕುಬಾಯಿ ರಜಪೂತ, ಜ್ಯೋತಿ ಪಾಟೀಲ, ಉಮಾ ಪ್ರದಾನಿ, ಲಕ್ಷ್ಮೀದೇವಿ ರತ್ನಾಗಿರಿ ಅನೇಕರು ಪ್ರಚಲಿತ ವಿದ್ಯಮಾನಗಳ ಮೇಲೆ ಬೆಳಕು ಚೆಲ್ಲಿ ಪ್ರೇಕ್ಷಕರ ಗಮನ ಸೆಳೆದರು.

ಪ್ರಮುಖರಾದ ನಾಗಪ್ಪ ಎಂ.ಸಜ್ಜನ್, ರಾಜೇಂದ್ರ ಮಾಡಬೂಳ, ಪ್ರಭವ ಪಟ್ಟಣಕರ್ , ಮಲ್ಲಿನಾಥ ಸಂಗಶೆಟ್ಟಿ, ಗಣೇಶ ಚಿನ್ನಾಕಾರ, ದಿನೇಶ ಮದಕರಿ, ಜೆ.ಎಸ್. ವಿನೋದಕುಮಾರ, ಶಿವಾನಂದ ಮಠಪತಿ, ಲಲೀತಾ ಪಾಟೀಲ, ಡಾ.ರೆಹಮಾನ್ ಪಟೇಲ್, ಮಹಾಲಿಂಗಯ್ಯ ಸ್ವಾಮಿ, ಬಾಬುರಾವ ಕೋಬಾಳ ಎಂ.ಎನ್. ಸುಗಂಧಿ, ಚಂದ್ರಕಾಂತ ಸೂರನ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News