ವಾಡಿ | ಅನ್ನಮ್ಮ ಚರ್ಚ್‌ನಲ್ಲಿ ಬಾಲಯೇಸು ವಾರ್ಷಿಕ ಹಬ್ಬ
ವಾಡಿ: ಬಾಲ ಯೇಸುವಿನ ವಿನಯ ಮತ್ತು ವಿಧೇಯತೆಯ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ದೇವರೊಂದಿಗೆ ಆಳವಾದ ಐಕ್ಯತೆಯನ್ನು ಸಾಧಿಸಬೇಕು ಎಂದು ಸ್ಥಳೀಯ ಸಂತ ಅನ್ನಮ್ಮ ದೇವಾಲಯದ ಮುಖ್ಯಸ್ಥ ಫಾದರ್ ರೋಷನ್ ಅವರು ಭಕ್ತರಿಗೆ ಕರೆ ನೀಡಿದರು.
ಪಟ್ಟಣದ ಸಂತ ಅನ್ನಮ್ಮ ದೇವಾಲಯದಲ್ಲಿ ಬುಧವಾರ ಸಂಜೆ ಹಮ್ಮಿಕೊಂಡ ಬಾಲ ಯೇಸು ವಾರ್ಷಿಕ ಹಬ್ಬದ ಪ್ರಾರ್ಥನಾ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಬಾಲ ಯೇಸುವಿನ ವಾರ್ಷಿಕ ಹಬ್ಬಕ್ಕೆ ತಯಾರಿಯಾಗಿ ಹಬ್ಬದ 10 ದಿನಗಳ ಮುಂಚೆ, ಜ.4 ರಂದು ಧ್ವಜರೋಹಣ ನೆರವೇರಿಸಿ ಜ.14 ರಂದು ಬಲಿಪೂಜೆಯನ್ನು ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಫಾದರ್ ಸಾಗರ, ಫಾದರ್ ವಿನ್ಸೆಂಟ್ ಪೆರೆರ, ಫಾದರ್ ಸೆಲ್ಬಂ ಅವರು ಪ್ರಾರ್ಥನೆಯನ್ನು ಸಲ್ಲಿಸಿದರು. ಸಿಸ್ಟರ್ ಗ್ರೇಸಿ, ಸಿಸ್ಟರ್ ವಸಂತ, ಸಿಸ್ಟರ್ ಅನು ಹಾಗೂ ಸಿಸ್ಟರ್ ಅಮಲಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ವಾಡಿ ಧರ್ಮ ಕೇಂದ್ರದ ಪಾಲನ ಪರಿಷತ್ತಿನ ಸದಸ್ಯರಾದ ಆನಂದ ಬೋಯಿನ್, ಕ್ರಿಸ್ಟೋಫರ್ ರಾಜು, ನವೀನ ಯರಬೋಯಿ, ರಾಯಪ್ಪ, ಆನಂದ, ಜೋಯೆಲ್, ತೆರೇಸಾ, ಅನಿತಾ, ಮೇರಿ, ಪ್ರಕಾಶ, ಬಾಲರಾಜ, ರಾಬರ್ಟ್, ಥಾಮಸ್, ಸೈಮನ್, ವಿಲಿಯಂ, ನಿಕೋಶ, ಶರತ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.