×
Ad

ಕಲಬುರಗಿ | ಹುದ್ದೆಗಳ ನೇಮಕಾತಿಗೆ ಆಗ್ರಹಿಸಿ ಸಹಿ ಸಂಗ್ರಹ ಅಭಿಯಾನ

Update: 2026-01-15 19:26 IST

ಕಲಬುರಗಿ: ಕೇಂದ್ರ ಮತ್ತು ರಾಜ್ಯ ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು ಹಾಗೂ ಭಾರತೀಯ ರೈಲ್ವೆ, ಬ್ಯಾಂಕಿಂಗ್ ಮತ್ತು ಎಲ್.ಐ.ಸಿ (LIC) ವಲಯಗಳ ಖಾಸಗೀಕರಣವನ್ನು ಕೈಬಿಡಬೇಕು ಎಂದು ಆಗ್ರಹಿಸಿ ಶಹಬಾದ್ ತಾಲೂಕಿನ ಹೊನಗುಂಟಾ ಗ್ರಾಮದಲ್ಲಿ ಬೃಹತ್ ಸಹಿ ಸಂಗ್ರಹ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.

ಗ್ರಾಮದಲ್ಲಿ ಸಂಕ್ರಮಣದ ಹಬ್ಬದ ಸಂದರ್ಭದಲ್ಲಿಯೂ ಜನರಿಂದ ಸಹಿ ಪಡೆದು ಹೋರಾಟಕ್ಕೆ ಬೆಂಬಲಿಸಲು ಮನವಿ ಮಾಡಿಕೊಳ್ಳಲಾಯಿತು.

ಸಹಿ ಸಂಗ್ರಹ ಅಭಿಯಾನದಲ್ಲಿ AIDYOನ ಜಿಲ್ಲಾಧ್ಯಕ್ಷರಾದ ಜಗನ್ನಾಥ್, ಸ್ಥಳೀಯ ಅಧ್ಯಕ್ಷರಾದ ರಘು ಪವಾರ್, ಕಾರ್ಯದರ್ಶಿ ರಮೇಶ್ ದೇವಕರ್, ದೇವರಾಜ್ ಮಿರಲಕರ, ಕಿರಣ್ ಮಾನೆ, ತೇಜಸ್ವಿನಿ ಆರ್ ಇಬ್ರಾಹಿಂಪುರ್, ತೇಜಸ್ ಆರ್ ಇಬ್ರಾಹಿಂಪುರ್, ಶ್ರೀಶೈಲ್, ವಿಠ್ಠಲ್ ರಾಠೋಡ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News