Kalaburagi | ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ಶೇ.100 ಸಾಧನೆ : ಬಿಎಲ್‌ಒಗೆ ಸನ್ಮಾನ

Update: 2026-07-28 16:57 IST

ಕಲಬುರಗಿ: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ–2026ರ ಅಂಗವಾಗಿ ನಡೆಯುತ್ತಿರುವ ಎನ್ಯೂಮರೇಷನ್ ಫಾರಂ (ಇಎಫ್) ಡಿಜಿಟೈಸೇಶನ್ ಕಾರ್ಯದಲ್ಲಿ ಶೇ.100 ಸಾಧನೆ ಮಾಡಿದ ಫರಹತಾಬಾದ್ ಹೋಬಳಿ ವ್ಯಾಪ್ತಿಯ ಮನಿಯಾಳ ಗ್ರಾಮದ ಮತಗಟ್ಟೆ ಸಂಖ್ಯೆ 224ರ ಬೂತ್ ಮಟ್ಟದ ಅಧಿಕಾರಿ (ಬಿಎಲ್‌ಒ) ನಬಿಲಾಲ್ ಖಾಜಿ ಅವರನ್ನು ತಾಲ್ಲೂಕು ಆಡಳಿತದಿಂದ ಸನ್ಮಾನಿಸಲಾಯಿತು.

ನಬಿಲಾಲ್ ಖಾಜಿ ಅವರು ಜುಲೈ 22ರಂದು ತಮ್ಮ ವ್ಯಾಪ್ತಿಯ ಎನ್ಯೂಮರೇಷನ್ ಫಾರಂ (ಇಎಫ್) ಡಿಜಿಟೈಸೇಶನ್ ಕಾರ್ಯವನ್ನು ಶೇ.100ರಷ್ಟು ಯಶಸ್ವಿಯಾಗಿ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಫರಹತಾಬಾದ್ ಉಪ ತಹಶೀಲ್ದಾರ್ ದೇವಿಂದ್ರ ನಾಡಗಿರಿ ಅವರು ಸನ್ಮಾನಿಸಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅಧಿಕಾರಿಗಳು, ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವನ್ನು ಸಮಯಕ್ಕೆ ಸರಿಯಾಗಿ ಹಾಗೂ ಯಶಸ್ವಿಯಾಗಿ ಪೂರ್ಣಗೊಳಿಸಿರುವ ನಬಿಲಾಲ್ ಖಾಜಿ ಅವರ ಕಾರ್ಯನಿಷ್ಠೆಯನ್ನು ಶ್ಲಾಘಿಸಿ, ಇತರ ಬಿಎಲ್‌ಒಗಳಿಗೂ ಇದು ಮಾದರಿಯಾಗಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಫರಹತಾಬಾದ್ ಕಂದಾಯ ನಿರೀಕ್ಷಕ ಶಿವಶರಣಪ್ಪ, ಗ್ರಾಮ ಆಡಳಿತ ಅಧಿಕಾರಿ ಕೆಂಚಪ್ಪ ಸೇರಿದಂತೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News