ಕಲಬುರಗಿ–ಮೈಸೂರು, ಕಲಬುರಗಿ–ಶಿವಮೊಗ್ಗ ಮಾರ್ಗದಲ್ಲಿ ಹೊಸ ಬಸ್‍ಗಳ ಕಾರ್ಯಾಚರಣೆ

Update: 2026-07-28 18:51 IST

ಕಲಬುರಗಿ : ಪ್ರಯಾಣಿಕರ ಬೇಡಿಕೆ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಕೆಆರ್‌ಟಿಸಿ) ಕಲಬುರಗಿ ವಿಭಾಗ–1 ವತಿಯಿಂದ ಕಲಬುರಗಿ–ಮೈಸೂರು ನಾನ್ ಎಸಿ ಸ್ಲೀಪರ್ (ಅಮೋಘವರ್ಷ) ಹಾಗೂ ಕಲಬುರಗಿ–ಶಿವಮೊಗ್ಗ ಎಸಿ ಸ್ಲೀಪರ್ (ಕಲ್ಯಾಣ ರಥ ಮಿನಿ) ನೂತನ ಬಸ್ ಸೇವೆಗಳನ್ನು ಜುಲೈ 29ರಿಂದ ಪ್ರಾಯೋಗಿಕವಾಗಿ ಆರಂಭಿಸಲಾಗಿದೆ.

ಕಲಬುರಗಿ–ಮೈಸೂರು (ನಾನ್ ಎಸಿ ಸ್ಲೀಪರ್) :

ಕಲಬುರಗಿ ಕೇಂದ್ರ ಬಸ್ ನಿಲ್ದಾಣದಿಂದ ಸಂಜೆ 6 ಗಂಟೆಗೆ ಹೊರಡುವ ಬಸ್, ಮರುದಿನ ಬೆಳಿಗ್ಗೆ 8 ಗಂಟೆಗೆ ಮೈಸೂರಿಗೆ ತಲುಪಲಿದೆ. ಈ ಬಸ್ ಶಹಾಪುರ, ಲಿಂಗಸೂರು, ಸಿಂಧನೂರು, ಬಳ್ಳಾರಿ, ಚಳ್ಳಿಕೇರೆ, ಹಿರಿಯೂರು ಹಾಗೂ ತುರುವೆಕೇರೆ ಮಾರ್ಗವಾಗಿ ಸಂಚರಿಸಲಿದೆ.

ಮೈಸೂರು–ಕಲಬುರಗಿ :

ಮೈಸೂರಿನಿಂದ ಸಂಜೆ 7 ಗಂಟೆಗೆ ಹೊರಡುವ ಬಸ್, ಮರುದಿನ ಬೆಳಿಗ್ಗೆ 9 ಗಂಟೆಗೆ ಕಲಬುರಗಿ ಕೇಂದ್ರ ಬಸ್ ನಿಲ್ದಾಣಕ್ಕೆ ಆಗಮಿಸಲಿದೆ.

ಕಲಬುರಗಿ–ಶಿವಮೊಗ್ಗ (ಎಸಿ ಸ್ಲೀಪರ್ – ಕಲ್ಯಾಣ ರಥ ಮಿನಿ) :

ಕಲಬುರಗಿಯಿಂದ ರಾತ್ರಿ 8.30 ಗಂಟೆಗೆ ಹೊರಡುವ ಬಸ್, ಮರುದಿನ ಬೆಳಿಗ್ಗೆ 7.15 ಗಂಟೆಗೆ ಶಿವಮೊಗ್ಗ ತಲುಪಲಿದೆ. ಈ ಬಸ್ ಶಹಾಪುರ, ಲಿಂಗಸೂರು, ಸಿಂಧನೂರು, ಗಂಗಾವತಿ, ಹೊಸಪೇಟೆ, ಕುಡ್ಲಗಿ, ಚಿತ್ರದುರ್ಗ ಹಾಗೂ ಚನ್ನಗಿರಿ ಮಾರ್ಗವಾಗಿ ಸಂಚರಿಸಲಿದೆ.

ಶಿವಮೊಗ್ಗ–ಕಲಬುರಗಿ :

ಶಿವಮೊಗ್ಗದಿಂದ ಸಂಜೆ 7 ಗಂಟೆಗೆ ಹೊರಡುವ ಬಸ್, ಮರುದಿನ ಬೆಳಿಗ್ಗೆ 5.45 ಗಂಟೆಗೆ ಕಲಬುರಗಿ ಕೇಂದ್ರ ಬಸ್ ನಿಲ್ದಾಣಕ್ಕೆ ತಲುಪಲಿದೆ.

ನೂತನ ಬಸ್‌ಗಳು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದ್ದು, ದೂರ ಪ್ರಯಾಣ ಮಾಡುವ ಸಾರ್ವಜನಿಕರಿಗೆ ಸುರಕ್ಷಿತ, ಸುಗಮ ಹಾಗೂ ಆರಾಮದಾಯಕ ಪ್ರಯಾಣದ ಅನುಭವ ಒದಗಿಸಲಿವೆ ಎಂದು ಕಲಬುರಗಿ ವಿಭಾಗ–1ರ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ. ಸಾರ್ವಜನಿಕರು ಈ ಸೇವೆಯ ಸದುಪಯೋಗ ಪಡೆಯುವಂತೆ ಅವರು ಮನವಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News