×
Ad

ಸಿಇಐಆರ್ ಪೋರ್ಟಲ್ ಮೂಲಕ 173 ಮೊಬೈಲ್ ಫೋನ್ ಪತ್ತೆ : ಕಲಬುರಗಿ ಜಿಲ್ಲಾ ಪೊಲೀಸರಿಂದ ವಾರಾಸುದಾರರಿಗೆ ವಾಪಸ್

Update: 2026-01-16 19:47 IST

ಕಲಬುರಗಿ: ಜಿಲ್ಲೆಯಾದ್ಯಂತ ವಿವಿಧ ಪೋಲಿಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಳುವಾದ, ಮರೆತು ಹೋದ ಹಾಗೂ ಕಾಣೆಯಾದಂತಹ ಮೊಬೈಲ್ ಗಳ ಕುರಿತು ದಾಖಲಾದ ಪ್ರಕರಣಗಳಿಂದ ಕೇಂದ್ರದ ಸಿಇಐಆರ್ ಪೋರ್ಟಲ್ ಮೂಲಕ 173 ಮೊಬೈಲ್ ಫೋನ್ ಗಳನ್ನು ಆಯಾ ವಾರಾಸುದಾರರಿಗೆ ಹಿಂತಿರುಗಿಸಲಾಗಿದೆ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು ತಿಳಿಸಿದ್ದಾರೆ.

ನಗರದ ಪೊಲೀಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾದನ ಹಿಪ್ಪರಗಾ ಪೊಲೀಸ್ ಠಾಣೆಯಲ್ಲಿ-5, ಅಫಜಲಪುರ -20, ರೇವೂರ-5, ಡಿ.ಜಿ.ಪೂರ-10, ಆಳಂದ ಪೋಲಿಸ್ ಠಾಣೆ-10, ನರೋಣ -11, ನಿಂಬರ್ಗಾ-5, ಸೇರಿದಂತೆ ಆಳಂದ ಉಪ ವಿಭಾಗದಲ್ಲಿ ಒಟ್ಟು 66 ಪತ್ತೆ ಮಾಡಲಾಗಿದ್ದು, ಶಹಾಬಾದ್ ಉಪ ವಿಭಾಗದಲ್ಲಿ -74 ಹಾಗೂ ಸೈಬರ್ ಪೊಲೀಸ್ ಠಾಣೆಯಲ್ಲಿ 11 ಮೊಬೈಲ್ ಫೋನ್ ಗಳನ್ನು ಪತ್ತೆ ಹಚ್ಚಲಾಗಿದೆ ಎಂದು ವಿವರಿಸಿದರು.

ಅದೇ ರೀತಿ ಗ್ರಾಮೀಣ ಉಪ ವಿಭಾಗದಿಂದ ಜೇವರ್ಗಿ -1, ನೆಲೋಗಿ-3, ಯಡ್ರಾಮಿ-6, ಕಮಲಾಪುರ-7, ಮಹಾಗಾಂವ-5 ಸೇರಿದಂತೆ ಒಟ್ಟು 22 ಮೊಬೈಲ್ ಫೋನ್ ಗಳನ್ನು ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ ಮಾಡಿ, ಆಯಾ ವಾರಾಸುದಾರರಿಗೆ ವಾಪಸ್ ಕೊಡಲಾಗಿದೆ ಎಂದರು.

ವಿವಿಧ ಠಾಣೆಗಳಲ್ಲಿ ದಾಖಲಾದ ಮೊಬೈಲ್ ಕಳ್ಳತನಕ್ಕೆ ಸಂಬಂಧಿಸಿದಂತೆ ಪತ್ತೆಗಾಗಿ ಡಿಎಸ್ಪಿ ಅವರ ಮಾರ್ಗದರ್ಶನದಲ್ಲಿ ಜಿಲ್ಲೆಯ ಎಲ್ಲಾ ಪಿಎಸ್ಐ, ಪಿಐರವರ ಮುಂದಾಳತ್ವದಲ್ಲಿ ಸಿಇಐಆರ್ ಕರ್ತವ್ಯ ಸಿಬ್ಬಂದಿಗಳ ಕಾರ್ಯಕ್ಷಮತೆಯಿಂದ ಹಾಗೂ ಸೈಬರ್ ಅಪರಾಧ ಠಾಣೆ ಅಧಿಕಾರಿಗಳು, ಸಿಬ್ಬಂದಿ ಸಹಾಯದಿಂದ 173 ಮೊಬೈಲ್ ಫೋನ್ ಪತ್ತೆ ಹಚ್ಚಿ ವಾರಾಸುದಾರರಿಗೆ ಹಿಂದಿರುಗಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಎಸ್ಪಿ ಮಹೇಶ್ ಮೇಘಣ್ಣನವರ್, ಡಿವೈಎಸ್ಪಿ ಶಂಕರಗೌಡ ಪಾಟೀಲ ಸೇರಿದಂತೆ ವಿವಿಧ ಉಪವಲಯದ ಪೊಲೀಸ್ ಅಧಿಕಾರಿ, ಸಿಬ್ಬಂದಿವರ್ಗವದವರು ಇದ್ದರು.

ಸಾರ್ವಜನಿಕರು ತಮ್ಮ ಮೊಬೈಲ್ ಫೋನ್ ಕಳೆದುಕೊಂಡಿದ್ದರೇ, ಕಳ್ಳತನವಾಗಿದ್ದರೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸಿಇಐಆರ್ ಪೋರ್ಟಲ್ ನಲ್ಲಿ ತಮ್ಮ ದೂರು ದಾಖಲಿಸಿದರೇ, ಕಳೆದುಕೊಂಡ ಮೊಬೈಲ್ ಫೋನ್ ಪತ್ತೆ ಹಚ್ಚಲು ಸುಲಭವಾಗಲಿದೆ.

-ಅಡ್ಡೂರು ಶ್ರೀನಿವಾಸುಲು, (ಎಸ್ಪಿ, ಕಲಬುರಗಿ)

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News