×
Ad

ಕಲಬುರಗಿ | ಭಾಷೆ ವಿಹಿನ ಪ್ರಪಂಚ ಊಹಿಸಲು ಸಾಧ್ಯವಿಲ್ಲ: ಡಾ.ಮಲ್ಲಿನಾಥ ಎಸ್.ತಳವಾರ

Update: 2025-02-22 15:37 IST

ಕಲಬುರಗಿ : ಜನರ ಮಧ್ಯೆ ಸಂಪರ್ಕ ಸಾಧಿಸಲು ಭಾಷೆ ಬಹಳ ಪ್ರಮುಖ ಮತ್ತು ಭಾಷೆ ವಿಹೀನ ಪ್ರಪಂಚದ ಕಲ್ಪನೆಯು ಊಹಿಸಲು ಸಾಧ್ಯವಿಲ್ಲ ಎಂದು ನೂತನ ಪದವಿ ಮಹಾವಿದ್ಯಾಲಯದ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಮಲ್ಲಿನಾಥ ಎಸ್.ತಳವಾರ ಅಭಿಮತ ವ್ಯಕ್ತಪಡಿಸಿದರು.

ಹೈದರಾಬಾದ್‌ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಕಾಲೇಜಿನ ಹಿಂದಿ, ಕನ್ನಡ, ಇಂಗ್ಲಿಷ್ ಮತ್ತು ಉರ್ದು ವಿಭಾಗಗಳ ಸಂಯುಕ್ತಾಶ್ರಯದಲ್ಲಿ ಅಂತರರಾಷ್ಟ್ರೀಯ ಮಾತೃ ಭಾಷೆ ದಿನ ಆಚರಣೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶಿ ಮತ್ತು ವಿದೇಶಿ ಅವರ ಅವರ ಭಾಷೆ ಮೇಲೆ ಅಭಿಮಾನವಿರಬೇಕು ಆದರೆ ಬೇರೆ ಭಾಷೆ ಬಗ್ಗೆ ದುರಾಭಿಮಾನ ಇರಬಾರದು ಎಂದು ನುಡಿದರು.

ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ರಾಜೇಂದ್ರ ಕೊಂಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾಷೆ ವಿಹಿನ್ ರಾಷ್ಟ್ರದ ಕಲ್ಪನೆ ಮಾಡಲು ಸಾಧ್ಯವಿಲ್ಲ ರಾಜ್ಯ ಮತ್ತು ರಾಷ್ಟ್ರದ ಬೆಳವಣಿಗೆಯಲ್ಲಿ ಭಾಷೆಯ ಪಾತ್ರವೂ ಅಷ್ಟೇ ಪ್ರಮುಖವಾಗಿರುತ್ತದೆ ಎಂದರು.

ಹಿಂದಿ ವಿಭಾಗದ ಮುಖ್ಯಸ್ಥ ಡಾ.ಪ್ರೇಮಚಂದ ಚವ್ಹಾಣ ಸ್ವಾಗತ ಮತ್ತು ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಜ್ಯೋತಿಪ್ರಕಾಶ ದೇಶಮುಖ ಕಾರ್ಯಕ್ರಮ ನಿರ್ವಹಿಸಿದರು. ಕವಿತಾ ಅಶೋಕ ವಂದಿಸಿದರು. ಪಲ್ಲವಿ ಮತ್ತು ಸ್ನೇಹಾ ಪ್ರಾರ್ಥನಾ ಗೀತೆಯನ್ನು ಹಾಡಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ  ಕವಿತಾ ಅಶೋಕ, ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾದ ಡಾ ಸವಿತಾ ಬೋಳಶೆಟ್ಟಿ ಹಾಗು ಉರ್ದು ವಿಭಾಗದ ಮುಖ್ಯಸ್ಥರಾದ ಡಾ.ಮೊಹಸಿನ ಫಾತಿಮಾ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ಪ್ರಾಧ್ಯಾಪಕರಾದ ಡಾ.ರೇಣುಕಾ ಎಚ್., ಡಾ.ಸುಭಾಷ್ ಡಿ., ಡಾ.ವಿಶ್ವನಾಥ್ ಡಿ,, ಡಾ.ಮಮತಾ ಎನ್., ಶರಣಪ್ಪ ಎಸ್., ಕವಿತಾ ಠಾಕೂರ, ದಾನಮ್ಮ, ಬಸಮ್ಮ ಮತ್ತು ಮಹಾವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News