×
Ad

ಕಲಬುರಗಿ | ಮೆಗಾ-ಮ್ಯಾಕ್ರೋ ಯೋಜನೆಯಡಿ ಕೃಷಿ ಯಂತ್ರಧಾರೆ ಕೇಂದ್ರ ಉದ್ಘಾಟನೆ

Update: 2025-06-22 19:38 IST

ಕಲಬುರಗಿ: ತಾಜಸುಲ್ತಾನಪೂರ ಗ್ರಾಮದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಮತ್ತು ಕೃಷಿ ಇಲಾಖೆ 2022-23ನೇ ಸಾಲಿನ ಕೆಕೆಆರ್‌ಡಿಬಿ ಅನುದಾನದ ಮೆಗಾ-ಮ್ಯಾಕ್ರೋ ಯೋಜನೆಯಡಿ ಕೃಷಿ ಯಂತ್ರಧಾರೆ ಕೇಂದ್ರವನ್ನು ಶಾಸಕ ಅಲ್ಲಮಪ್ರಭು ಪಾಟೀಲ್‌ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಅವರು, ಕೃಷಿ ಚಟುವಟಿಕೆಗಳಿಗೆ ಬೇಕಾದ ಕೃಷಿ ಯಂತ್ರಗಳು ಮತ್ತು ಉಪಕರಣಗಳನ್ನು ರೈತರಿಗೆ ರಿಯಾಯಿತಿ ದರದಲ್ಲಿ ಬಾಡಿಗೆ ನೀಡಲಾಗುತ್ತಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ಬೀಜ, ಗೊಬ್ಬರ ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನಿದ್ದು ರೈತರು ಆತಂಕಪಡಬಾರದು. ಎಲ್ಲಾ ರೈತರು ಕಡ್ಡಾಯವಾಗಿ ಬೆಳೆ ವಿಮೆ ಮಾಡಿಸಬೇಕು. ಅಧಿಕಾರಿಗಳು ಸರ್ಕಾರದ ಸೌಲಭ್ಯಗಳನ್ನು ರೈತರಿಗೆ ತಿಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಕೃಷಿ ಸಮಾಜದ ಅಧ್ಯಕ್ಷ ಸಿದ್ರಾಮಪ್ಪ ಪಾಟೀಲ ಧಂಗಾಪುರ, ಕೃಷಿ ಇಲಾಖೆ ಜೆಡಿ ಸಮದ್ ಪಟೇಲ್, ಗ್ರಾಪಂ ಅಧ್ಯಕ್ಷೆ ಸಜಿದಾ ಬೇಗಂ ಮುಜಾವರ್, ಉಪಾಧ್ಯಕ್ಷ ಸಂಜುಕುಮಾರ ಜವಳಕರ, ಪಿಡಿಓ ಅನುಪಮ್, ಚಂದ್ರುಗೌಡ, ಬಸವರಾಜ ಜೀವಣಗಿ, ಸುನೀಲ ಮದನಕರ್, ಭೀಮರಾವ ಮೇಳಕುಂದಾ, ಪ್ರದೀಪ ಪಾಟೀಲ, ನೀಲಕಂಠ ಭೀಮಳ್ಳಿ, ಶಿವಕುಮಾರ ಮಗಿ, ತೋಲಾ ಭಾಷ, ವಜ್ರಮುನಿ ಸಿಂಗೆ, ವಿಶ್ವನಾಥ ಜಮಾದಾರ, ಸೈದಪ್ಪ ಸೇರಿದಂತೆ ಕೃಷಿಕರು, ಗ್ರಾಮಸ್ಥರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News