ಕಲಬುರಗಿಯಲ್ಲಿ ‘ವಾರ್ತಾಭಾರತಿ’ ನೂತನ ಕಚೇರಿ ಉದ್ಘಾಟನೆ
ಡಿ.20ರಂದು ಕಲ್ಯಾಣ ಕರ್ನಾಟಕ ಆವೃತ್ತಿ ಲೋಕಾರ್ಪಣೆ
ಕಲಬುರಗಿ: 'ವಾರ್ತಾಭಾರತಿ' ಕನ್ನಡ ದೈನಿಕದ ಕಲ್ಯಾಣ ಕರ್ನಾಟಕ ಆವೃತ್ತಿಯು ಡಿ.20ರಂದು ಲೋಕಾರ್ಪಣೆಯಾಗಲಿರುವ ಮುಂಚಿತವಾಗಿ ಕಲಬುರಗಿ ನಗರದಲ್ಲಿ 'ವಾರ್ತಾಭಾರತಿ'ಯ ನೂತನ ಕಚೇರಿಯ ಉದ್ಘಾಟನೆ ಗುರುವಾರ ಸಂಜೆ ನೆರವೇರಿತು.
ನಗರದ ಸರ್ದಾರ್ ವಲ್ಲಭ್ ಭಾಯಿ ಪಟೇಲ್ ವೃತ್ತದಿಂದ ಪಿಡಿಎ ಕಾಲೇಜಿಗೆ ಹೋಗುವ ರಸ್ತೆಯಲ್ಲಿರುವ ಮನೋರಮಾ ಎಸ್ ಆರ್ ಎಂಬಸಿ ಕಟ್ಟಡದ ಎರಡನೇ ಮಹಡಿಯಲ್ಲಿ ವಾರ್ತಾಭಾರತಿ ಪತ್ರಿಕೆಯ ಹೊಸ ಕಚೇರಿಯನ್ನು ಕಲಬುರಗಿಯ ಖ್ಯಾತ ಉದ್ಯಮಿ ಅಝೀಝ್ ಶಹನಾ ಅವರು ಉದ್ಘಾಟಿಸಿದರು.
ಸಾಮಾಜಿಕ ಹೋರಾಟಗಾರ್ತಿ ಕೆ.ನೀಲಾ, ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಅರ್ಜುನ್ ಭದ್ರೆ, ಸಿಖ್ ಸಮುದಾಯದ ನಾಯಕ ಗುರುಮಿತ್ ಸಿಂಗ್ ಅಹುಜಾ, ಸುಭಾಷ್ ರಾಠೋಡ್, ಭೀಮರಾವ್ ಟಿ.ಟಿ, ವಹಾಜ್ ಬಾಬಾ, ಇಕ್ಬಾಲ್ ಅಲಿ, ನಿವೃತ್ತ ತಹಶೀಲ್ದಾರ್ ನಿಸಾರ್ ಅಹ್ಮದ್ ವಜೀರ್, ಅಸ್ಗರ್ ಚುಲಬುಲ್, ಸಂತಗುರು ಶ್ರೀ ಬುದ್ಧಾನಂದ ಸ್ವಾಮೀಜಿ, ಸುನೀಲ್ ಮಾನ್ಪಡೆ, ಅಪ್ಝಲ್ ಮಹಮೂದ್, ಸಂಧ್ಯಾರಾಜ್ ಸ್ಯಾಮ್ಯುಯೆಲ್, ಲೂಯಿಸ್ ಕೋರಿ, ಶಿವಾನಂದ ಹೊನಗುಂಟಿ, ಆರ್.ಜೆ ಶೇಟಕಾರ್, ದಿಗಂಬರ ಬೆಳಮಗಿ, ಮಹೇಶ್ ಹುಬ್ಬಳ್ಳಿ, ತಿಪ್ಪಣ್ಣ ಒಡೆಯರ್, ಮಲ್ಲಿಕಾರ್ಜುನ್ ಬೋವಿ, ಲಕ್ಷ್ಮಣ ಪೂಜಾರಿ, ನಾಗೇಂದ್ರ ಜವಳಿ, ಆಕಾಶ್ ನಂದಾ, ನಂದಕುಮಾರ್ ಮಾಲಿಪಾಟೀಲ್, ಇರ್ಫಾನುಲ್ಲಾ ಶರೀಫ್, ಝೀಶಾನ್ ಅಖೀಲ್ ಸಿದ್ದೀಕ್, ನ್ಯಾಯವಾದಿ ಜಬ್ಬಾರ್ ಗೋಲಾ, ಎಸ್.ಎಸ್.ತಾವಡೆ, 'ವಾರ್ತಾ ಭಾರತಿ' ಪತ್ರಿಕೆಯ ಪ್ರಧಾನ ಸಂಪಾದಕ ಅಬ್ದುಸ್ಸಲಾಮ್ ಪುತ್ತಿಗೆ, ಸ್ಥಾಪಕ ನಿರ್ದೇಶಕ ಯಾಸೀನ್ ಮಲ್ಪೆ, ಕಲ್ಯಾಣ ಕರ್ನಾಟಕ ಕೋ ಆರ್ಡಿನೇಟರ್ ಸಾಜಿದ್ ಅಲಿ, ಜಿಲ್ಲಾ ವರದಿಗಾರ ದಸ್ತಗೀರ್ ನದಾಫ್ , ಅಂಕಣಕಾರರಾದ ಹೊನಕೆರೆ ನಂಜುಂಡೇಗೌಡ, ರಾಜಶೇಖರ ಹತಗುಂದಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.