×
Ad

ಕಲಬುರಗಿ | ಲೋಪದೋಷಗಳು ಸರಿಪಡಿಸಿ ಗಣಿತಿ ಕಾರ್ಯ ನಡೆಸಲು ಮನವಿ

Update: 2025-05-10 21:13 IST

ಕಲಬುರಗಿ : ರಾಜ್ಯದಲ್ಲಿ ಒಳಮೀಸಲಾತಿ ಪರಿಶಿಷ್ಟ ಜಾತಿ ಪರಿಶಿಷ್ಟ 101 ಜಾತಿಗಳ ಬಗ್ಗೆ ಸಾಮಾಜಿಕ, ಶೈಕ್ಷಣಿಕ ಸರ್ವೆ ನಡೆಯುತ್ತಿದ್ದು ಇದರಲ್ಲಿ ಅನೇಕ ಲೋಪಗಳಿದ್ದು ಅವುಗಳನ್ನು ಸರಿಪಡಿಸಬೇಕೆಂದು ಜಿಲ್ಲಾ ಮಾದಿಗ ಸಂಘಟನೆಗಳ ಒಕ್ಕೂಟದಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಈಗಾಗಲೇ ರಾಜ್ಯದಲ್ಲಿ ಒಳಮೀಸಲಾತಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಇವುಗಳ ಸಾಮಾಜಿಕ ಶೈಕ್ಷಣಿಕ ಗಣತಿ ಕಾರ್ಯಾ ಪ್ರಾರಂಭವಾಗಿದ್ದು ಸರ್ವೆ ಗಣಿತಿ ಕಾರ್ಯದಲ್ಲಿ ಶೇ.70 ರಷ್ಟು ಇಂಟರ್ನೆಟ್ ಆನ್ಲೈನ್ ಸರ್ವರ್ ಡೌನ್ ಆಗುತ್ತಿದೆ. ಇದರಿಂದ ಗಣಿತಿ ಕಾರ್ಯಕ್ಕೆ ತೊಂದರೆ ಉಂಟಾಗುತ್ತಿದೆ. ಗಣಿತಿಗೆ ಬಂದಂತ ಸಹ ಶಿಕ್ಷಕರಿಗೆ ಹಾಗೂ ಬಿ ಎಲ್ ಓ ಗಳಿಗೆ ಸರಿಯಾದ ಹೊಂದಾಣಿಕೆ ಇರುವುದಿಲ್ಲ. ಹೀಗಾಗಿ ಗಣಿತಿ ಕಾರ್ಯ ವಿಳಂಬವಾಗುತ್ತಿದೆ.

ಗಣಿತಿ ಕಾರ್ಯಕ್ಕೆ ಬಂದಂತಹ ಎಲ್ಲಾ ಶಿಕ್ಷಕರಿಗೆ ಗಣತಿಯ ಕುರಿತು ಆನ್ಲೈನ್ ಆಪ್‍ಗಳ ಬಗ್ಗೆ ಹೆಚ್ಚಿನ ಮಾಹಿತಿ ಇರುವುದಿಲ್ಲ ಹಾಗೂ ಅವರಲ್ಲಿ ಅಂತಹ ಮೊಬೈಲ್ ಗಳು ಇರದೇ ಅವರ ಪತಿಯವರ ಮೊಬೈಲ್ ಗಳು ಬಳಸುತ್ತಿದ್ದಾರೆ, ಪರಿಶಿಷ್ಟ ಜಾತಿ ಗಣತಿಗೆ ಬಂದಾಗ ಫಲಾನುಭವಿಯ ಮನೆ ಒಂದು ಕಡೆ ಅವರ ಚುನಾವಣೆಯ ಗುರುತಿನ ಕಾರ್ಡಿನ ವಿಳಾಸ ಒಂದು ಕಡೆ ಇರುವುದರಿಂದ ಗಣಿತಿ ಕಾರ್ಯದಲ್ಲಿ ತಾಂತ್ರಿಕ ದೋಷ ಉಂಟಾಗುತ್ತಿದೆ. ಕಲಬುರಗಿ ಜಿಲ್ಲೆಯಲ್ಲಿ ಸುಮಾರು ಪರಿಶಿಷ್ಟ ಜಾತಿ ಜನಾಂಗದವರು 10 ಲಕ್ಷ ಜನರಿದ್ದು, ಮನೆ ಮನೆಗೆ ಹೋಗಿ ಸರ್ವೆ ಆಗುತ್ತಿಲ್ಲ ಎಲ್ಲೋ ಕುಳಿತುಕೊಂಡು ಸರ್ವೇ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಸಂದರ್ಭದಲ್ಲಿ ಲಿಂಗರಾಜ ತಾರಪೈಲ್, ಶ್ಯಾಮ್ ನಾಟೇಕರ್, ನಾಗರಾಜ ಗುಂಡಗುರ್ತಿ, ಮಲ್ಲಿಕಾರ್ಜುನ್ ಜಿನಕೆರಿ, ಪ್ರಕಾಶ್ ಮಾಳಗೆ, ಬಂಡೇಶ ರತ್ನಡಗಿ, ರವಿ ಹೊಸಮನಿ, ದೇವರಾಜ್ ಕೊಳ್ಳೂರ್, ಪ್ರದೀಪ, ಮಲ್ಲಪ್ಪ ಚಿಗನೂರ ಸೇರಿಂದತೆ ಇತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News