×
Ad

ಕಲಬುರಗಿ | ರಾಷ್ಟ್ರೀಯ ಭ್ರಷ್ಟಾಚಾರ ನಿಗ್ರಹ, ಕಾರ್ಯಾಚರಣೆ ಸಮಿತಿಯಿಂದ ಕರ್ನಾಟಕಕ್ಕೆ ಪ್ರಶಸ್ತಿ

Update: 2025-02-14 16:39 IST

ಕಲಬುರಗಿ : ರಾಷ್ಟ್ರೀಯ ಭ್ರಷ್ಟಾಚಾರ ನಿಗ್ರಹ ಮತ್ತು ಕಾರ್ಯಾಚರಣೆ ಸಮಿತಿ ನವದೆಹಲಿ ವತಿಯಿಂದ ಮುಂಬೈ ಭಿವಂಡಿಯಲ್ಲಿ ಒಂದು ದಿನದ ರಾಷ್ಟ್ರೀಯ ಸಮಾವೇಶ ಹಾಗೂ ಶಪಥ ಗ್ರಹಣ ಕಾರ್ಯಕ್ರಮದಲ್ಲಿ ವಿವಿಧ ರಾಜ್ಯಗಳ ಸಾಧನೆಗಳನ್ನು ಆಲಿಸಿ, ಕರ್ನಾಟಕ ರಾಜ್ಯದ ಅಧ್ಯಕ್ಷರಾದ ಕೆ.ಪ್ರಭಾಕರ ಮತ್ತು ಪ್ರಧಾನ ಕಾರ್ಯದರ್ಶಿ ದಯಾನಂದ ಅವರಿಗೆ ಮತ್ತು ದಕ್ಷಿಣ ಭಾರತದ ಒಟ್ಟಾರೆ ಸಾಧನೆಗಾಗಿ ಡಾ.ಎ.ಎಸ್ ಭದ್ರಶೆಟ್ಟಿಯವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಮಾವೇಶದಲ್ಲಿ ಹಾಜರಿದ್ದ ಸದಸ್ಯರುಗಳಿಗೆ ರಾಷ್ಟ್ರೀಯ ಅಧ್ಯಕ್ಷರು ಶಪಥ ಬೋಧನೆ ಮಾಡಿದರು. ಸಮಾವೇಶದ ಅಧ್ಯಕ್ಷತೆ ಡಾ.ರಾಜೇಶ್ ಶುಕ್ಲಾ ವಹಿಸಿದ್ದರು. ಯಶವಂತ ಶರ್ಮಾ ಮಹಾರಾಜರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ರಾಷ್ಟ್ರೀಯ ಸಮಾವೇಶದಲ್ಲಿ ವಿವಿಧ ರಾಜ್ಯಗಳಿಂದ ಪದಾಧಿಕಾರಿಗಳು ಆಗಮಿಸಿದ್ದರು ಮತ್ತು ಕರ್ನಾಟಕ ರಾಜ್ಯದ ಕಲಬುರ್ಗಿ ಯಿಂದ ಶಾಮರಾವ್ ಪ್ಯಾಟಿ, ಸುರೇಶ್ ಕಲಶೆಟ್ಟಿ, ವಿಜಯ ಕುಮಾರ್ ಬಿರಾದಾರ, ನಾಡಗೌಡ ಬಿರಾದಾರ್, ಶರಣಬಸಪ್ಪ ರಾಂಪುರೆ, ನಾಗಣ್ಣ, ಸಂತೋಷ್ ಮತ್ತು ಸೂರ್ಯಕಾಂತ್ ಇವರು ಭಾಗಿಯಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News