×
Ad

ಕಲಬುರಗಿ | ಭಗತ್‍ಸಿಂಗ್ ಹೋರಾಟದ ಬದುಕು ನಮಗೆಲ್ಲರಿಗೂ ಆದರ್ಶ : ಜಗನ್ನಾಥ ಎಸ್‍.ಹೆಚ್

Update: 2025-10-03 19:29 IST

ಕಲಬುರಗಿ: ಭಗತ್‍ಸಿಂಗ್ ಅವರ ಹೋರಾಟದ ಬದುಕು ನಮಗೆಲ್ಲರಿಗೂ ಆದರ್ಶ. ಅವರ ಆದರ್ಶ ಬದುಕು ಹಾಗೂ ವೈಚಾರಿಕತೆ ಅರ್ಥ ಮಾಡಿಕೊಳ್ಳುವುದು ಅಗತ್ಯವಿದೆ ಎಂದು ಎಐಡಿವೈಒ ಜಿಲ್ಲಾಧ್ಯಕ್ಷ ಜಗನ್ನಾಥ ಎಸ್.ಹೆಚ್ ಹೇಳಿದರು.

ಶಹಾಬಾದ ನಗರದ ಬಸವೇಶ್ವರ ವೃತ್ತದಲ್ಲಿ ಎ.ಐ.ಡಿ.ವೈ.ಓ ಸಂಘಟನೆಯ ಸಮಿತಿಯಿಂದ ಆಯೋಜಿಸಲಾದ ಕ್ರಾಂತಿಕಾರಿ ಶಹೀದ್ ಭಗತ್‍ಸಿಂಗ್ ರವರ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.

ಭಗತ್‍ಸಿಂಗ್‍ರ ಹೋರಾಟವು ಕೇವಲ ಬ್ರೀಟಿಷರಿಂದ ಸ್ವಾತಂತ್ರ್ಯ ಪಡೆಯುವುದಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಸ್ವಾತಂತ್ರ್ಯ ಭಾರತದಲ್ಲಿ ಸ್ರ್ತೀ-ಪುರುಷ ತಾರತಮ್ಯ, ಜಾತೀಯತೆ, ಬಡವ-ಶ್ರೀಮಂತ ಎಂಬ ಅಸಮಾನತೆ ಇಲ್ಲದ ಹಾಗೂ ಎಲ್ಲರಿಗೂ ಶಿಕ್ಷಣ, ಉದ್ಯೋಗ, ರೈತ-ಕಾರ್ಮಿಕರು ನೆಮ್ಮದಿಯ ಜೀವನ ಮಾಡುವಂತಹ ಶೋಷಣಾ ಮುಕ್ತ ಸಮಾಜದ ನಿರ್ಮಾಣ ಮಾಡುವ ಕನಸು ಅವರದ್ದಾಗಿತ್ತು. ಆದರೆ ಇಂದು ಜಾತಿ, ಧರ್ಮ, ಪ್ರಾಂತ್ಯ-ಭಾಷೆಯ ಆಧಾರದ ಮೇಲೆ ಜನರ ಐಕ್ಯತೆಯನ್ನು ಮುರಿಯುತ್ತಿದ್ದಾರೆ. ಇದು ಒಂದು ಕಡೆ ಆದರೆ ಬಡತನ, ಬೆಲೆ ಏರಿಕೆ, ಆರ್ಥಿಕ ಬಿಕ್ಕಟ್ಟು ನಿರುದ್ಯೋಗದಂತಹ ಸಮಸ್ಯೆಗಳು ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಭಗತಸಿಂಗ್ ಅವರ ವಿಚಾರ, ಆದರ್ಶ ಮತ್ತು ಅವರ ರಾಜಕೀಯ ದಾರಿಯನ್ನು ಆರ್ಥಮಾಡಿಕೊಂಡು ಅವರ ಕನಸನ್ನು ಇವತ್ತಿನ ಯುವಜನರು ನನಸು ಮಾಡಬೇಕಾಗಿದೆ ಎಂದರು.

ಸಂಘಟನೆಯ ಮುಖಂಡರಾದ ರಾಜೇಂದ್ರ ಅತನೂರ ,ಸಿದ್ದು ಚೌದ್ರಿ, ರಮೇಶ್ ದೇವಕರ್ ಮಾತನಾಡಿ, ಭಗತ್‍ಸಿಂಗ್ ಅವರು ಅತ್ಯಂತ ಸಣ್ಣ ವಯಸ್ಸಿನಲ್ಲಿಯೇ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದರು. ಕೇವಲ ಬ್ರಿಟಿಷರನ್ನು ಭಾರತದಿಂದ ಹೊರಗಟ್ಟಿದರೆ ಸಾಲದು. ಸ್ವಾತಂತ್ರ್ಯದ ನಂತರ ಭಾರತವನ್ನು ಬಂಡವಾಳಗಾರರ ಕೈವಶವಾಗದಂತೆ ನೋಡಿಕೊಂಡು ಶೋಷಣೆ ರಹಿತ ಸಮಾಜಕ್ಕಾಗಿ ಎಲ್ಲರಿಗೂ ಶಿಕ್ಷಣ, ಆರೋಗ್ಯ, ಜೀವನ ಭದ್ರತೆ ಖಾತ್ರಿಪಡಿಸಲು ಸಮಾಜವಾದಿ ಕ್ರಾಂತಿ ನೆರವೇರಿಸುವ ಆಶಯ ಹೊಂದಿದ್ದರು. ಯುವಜನರು ನೈತಿಕತೆ, ಚಾರಿತ್ರೆ ಬೆಳೆಸಿಕೊಂಡು ಭಗತ್ ಸಿಂಗ್‍ರ ಆಶಯವಾದ ಶೋಷಣೆ ರಹಿತ ಸಮಾಜವಾದಿ ಭಾರತ ನಿರ್ಮಾಣದ ದಿಕ್ಕಿನಲ್ಲಿ ಶ್ರಮಿಸಬೇಕು. ಅಂದಾಗ ಭಗತ್ ಸಿಂಗ್‍ರಿಗೆ ನಿಜವಾದ ಗೌರವ ಸಲ್ಲಿಸಿದಂತೆ ಆಗುತ್ತದೆ ಎಂದರು.

ಈ ಸಂದರ್ಭದಲ್ಲಿ ರಘು ಪವಾರ್, ದೇವರಾಜ್ ಮಿರಲ್ಕರ, ತೇಜಶ್ವಿನಿ ಆರ್ ಇಬ್ರಾಹಿಂಪುರ, ಶಿವರಾಜ, ತೇಜಸ್ ಆರ್ ಇಬ್ರಾಹಿಂಪುರ ಹಾಗೂ ಇತರರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News