ಕಲಬುರಗಿ | ಕರುನಾಡಿನ ಮೊಟ್ಟ ಮೊದಲ ಧರ್ಮವೇ ಬೌದ್ಧ ಧಮ್ಮ : ಸಂಶೋಧಕ ಹರ್ಷಕುಮಾರ ಕುಗ್ವೆ
ಕಲಬುರಗಿ : ಮೊಟ್ಟ ಮೊದಲು ಶಾಸನಗಳು ಸಿಕ್ಕಿದ್ದು ಸನ್ನತ್ತಿ (ಕನಗನಹಳ್ಳಿ)ಯಲ್ಲಿ ಎನ್ನುವುದು ಎಷ್ಟು ಸತ್ಯವೋ, ಶಾತವಾಹನರು ಕರ್ನಾಟಕದ ಮೂಲದ ಅರಸರು ಎನ್ನುವುದು ಅಷ್ಟೇ ಸತ್ಯ. ಕನ್ನಡಿಗರ ಮತ್ತು ಕರುನಾಡಿನ ಮೊಟ್ಟ ಮೊದಲ ಧರ್ಮ ಅದು ಬೌದ್ಧ ಧಮ್ಮ. ಶಾತವಾಹನರ ಇತಿಹಾಸ ಬರೆಯುವಾಗ ಇತಿಹಾಸಕಾರರು ಉದ್ದೇಶಪೂರ್ವಕವಾಗಿ ಬೌದ್ಧ ಧರ್ಮ ಮರೆಮಾಚಿದ್ದಾರೆ ಎಂದು ಸಂಶೋಧಕ ಹರ್ಷಕುಮಾರ ಕುಗ್ವೆ ಹೇಳಿದರು.
ಚಿತ್ತಾಪುರ ತಾಲೂಕಿನ ಸನ್ನತಿ (ಕನಗನಹಳ್ಳಿ) ಗ್ರಾಮದ ಐತಿಹಾಸಿಕ ಬೌದ್ಧ ಮಹಾಸ್ಥೂಪದ ಆವರಣದಲ್ಲಿ ಬುಧವಾರ ನಡೆದ ಸದ್ಧಮ್ಮ ಸಜ್ಜಾಯನ ಹಾಗೂ ತ್ರಿಪಿಟಕ ಪಠಣ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿ ಅವರು, ಸಾಮ್ರಾಟ ಅಶೋಕನ ಬಂಡೆ ಶಾಸನಗಳು ದೇಶಾದ್ಯಂತ ಹಲವು ಕಡೆ ದೊರಕಿವೆ. ಆದರೆ, ಸನ್ನತ್ತಿಯಲ್ಲಿ (ಕನಗನಹಳ್ಳಿ) 200ಕ್ಕೂ ಹೆಚ್ಚು ಶಾಸನಗಳು ಸಿಕ್ಕಿವೆ. ಇದರಿಂದ ಸಾಮ್ರಾಟ್ ಅಶೋಕ ಚಕ್ರವರ್ತಿ ಹೇಗಿದ್ದನು ಎಂದು ಜಗತ್ತಿಗೆ ತಿಳಿಸಿದ್ದು ಸನ್ನತ್ತಿಯಲ್ಲಿ ಸಿಕ್ಕಿರುವ ಶಾಸನಗಳಿಂದ ಎಂದು ತಿಳಿಸಿದ್ದರು.
ಭಂತೆ ಇತಿಕಾ ಮಹಾಥೇರಾ ಬೆಂಗಳೂರು ಮಹಾಬೋಧಿ ಸೊಸೈಟಿ ಅಧ್ಯಕ್ಷರಾದ ಭಂತೆ ಕಶ್ಯಪ ಮಹಾಥೇರಾ ಧಮ್ಮ ಸಂದೇಶ ನೀಡಿದರು. ಬೌದ್ಧ ಧಮ್ಮ ಹಾಗೂ ಸನ್ನತ್ತಿ ಶಾಸನಗಳ ಕುರಿತು ಸಂಶೋದಕ ಹರ್ಷಕುಮಾರ ಕುಗ್ವೆ ವಿಶೇಷ ಉಪನ್ಯಾಸ ನೀಡಿದರು. ಧಮ್ಮ ಜಾಥವನ್ನು ಟೋಪಣ್ಣ ಕೋಮಟೆ ಹಾಗೂ ಸಾಯಬಣ್ಣ ಹೊಸಮನಿ ಉದ್ಘಾಟಿಸಿದರು.
ಅಮೇರಿಕಾದ ಐ.ಟಿ.ಸಿ.ಸಿ. ಸಂಸ್ಥಾಪಕಿ ವಾಗ್ಮೋ ದೀಕ್ಷಿ ಅವರು ಸಾಮ್ರಾಟ ಅಶೋಕ ಪುಥಳಿಗೆ ಮಾಲಾರ್ಪಣೆ ಮತ್ತು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಭಂತೆ ಧಮ್ಮಾನಂದ ಮಹಾಥೇರಾ, ಭಂತೆ ಮನೋರಕ್ಖಿತ ಥೇರಾ, ಭಂತೆ ಜ್ಞಾನ ಸಾಗರ, ಭಂತೆ ವರಜ್ಯೋತಿ, ಭಂತೆ ಧಮ್ಮಸಿರಿ, ಭಂತೆ ಖಂತಿಸಾರೋ, ಭಂತೆ ಲಂಕಾನಂದ ಸೇರಿದಂತೆ 200ಕ್ಕೂ ಅಧಿಕ ಭಂತೆಜಿಗಳು ಸಾನಿದ್ಯ ವಹಿಸಿದ್ದರು.
ಟೋಪಣ್ಣ ಕೋಮಟೆ, ವಿಠ್ಠಲ ದೊಡ್ಡಮನಿ, ರವಿಕಿರಣ ಒಂಟಿ, ಮರಿಯಪ್ಪ ಹಳ್ಳಿ, ಅರ್ಜುನ್ ಭದ್ರೆ, ದೇವಿಂದ್ರ ಹೆಗಡೆ, ಸೂರ್ಯಕಾಂತ ನಿಂಬಾಳಕರ, ಸುರೇಶ ಮೆಂಗನ, ಬಸವರಾಜ ಬೆಣ್ಣೂರ, ಎಸ್.ಆರ್.ಕೊಲ್ಲೂರ, ನೀಲಕಂಠ ಬಡಿಗೇರ, ದೇವಿಂದ್ರ ಹೆಗಡೆ, ಮಲ್ಲಿಕಾರ್ಜುನ ಪೂಜಾರಿ, ಸೂರ್ಯಕಾಂತ ರದ್ದೇವಾಡಿ, ಲಕ್ಷ್ಮೀಕಾಂತ ಹುಬ್ಳಿ, ಮೋನಪ್ಪ ನಡಗೇರಿ, ಬಾಬು ಬಂದಳ್ಳಿ ಶಿವಯೋಗಿ ದೇವಿದ್ರಕರ, ಶ್ರೀಮಂತ ಭಾವಿಮನಿ, ಸಂದೀಪ ಕಟ್ಟಿ ಶರಣಬಸು ಸಿರೂರಕರ ಇದ್ದರು.