ಕಲಬುರಗಿ | ಕೇಂದ್ರ ಕಾರಾಗೃಹದಲ್ಲಿ ಪಿಎಸ್‌ಐ ನೇಮಕಾತಿ ಅಕ್ರಮದ ಆರೋಪಿ ಆರ್.ಡಿ.ಪಾಟೀಲ್- ಜೈಲು ವಾರ್ಡನ್ ಮಧ್ಯೆ ಘರ್ಷಣೆ : ಪ್ರಕರಣ ದಾಖಲು
Update: 2025-11-23 20:07 IST
ಕಲಬುರಗಿ : ಪಿಎಸ್‌ಐ ನೇಮಕಾತಿ ಅಕ್ರಮದ ಪ್ರಮುಖ ಆರೋಪಿಯಾಗಿರುವ ಆರ್.ಡಿ. ಪಾಟೀಲ್ ಮತ್ತು ಜೈಲು ವಾರ್ಡನ್ ಶಿವಕುಮಾರ್ ಮಧ್ಯೆ ಕೇಂದ್ರ ಕಾರಾಗೃಹದಲ್ಲಿ ಘರ್ಷಣೆ ನಡೆದಿರುವ ಬಗ್ಗೆ ವರದಿಯಾಗಿದೆ.
ಸುಪ್ರೀಂಕೋರ್ಟ್‌ನಿಂದ ಮೂರು ವಾರಗಳ ಮಧ್ಯಂತರ ಜಾಮೀನು ಪಡೆದು ಬಿಡುಗಡೆಯಾಗುತ್ತಿದ್ದ ಸಂದರ್ಭದಲ್ಲಿ ವಾರ್ಡನ್ ಶಿವಕುಮಾರ್ ಬಿಡುಗಡೆಗೆ ನಿರಾಕರಿಸಿ ಹಲ್ಲೆ ಮಾಡಿದ್ದಾಗಿ ಆರ್.ಡಿ.ಪಾಟೀಲ್ ಆರೋಪಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಆರ್.ಡಿ.ಪಾಟೀಲ್ ಕೂಡ ಹಲ್ಲೆ ಮಾಡಿದ್ದಾಗಿ ವಾರ್ಡನ್ ಶಿವಕುಮಾರ್ ದೂರು ನೀಡಿದ್ದಾರೆ.
ಈ ಕುರಿತು ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಎರಡು ಎಫ್‌ಐಆರ್ ದಾಖಲಾಗಿದೆ.