ಕಲಬುರಗಿ | ಬೈಕ್ ಢಿಕ್ಕಿಯಾಗಿ ಜಿಂಕೆ ಸಾವು : ಸವಾರ ಗಂಭೀರ
Update: 2025-02-11 19:27 IST
ಕಲಬುರಗಿ : ಬೈಕ್‌ಗೆ ಜಿಂಕೆ ಢಿಕ್ಕಿ ಹೊಡೆದು, ಬೈಕ್ ಸವಾರ ಗಂಭೀರ ಗಾಯಗೊಂಡು, ಜಿಂಕೆ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಅಫಜಲ್ ಪುರ ತಾಲೂಕಿನ ಇಂಗಳಗಿ ಕ್ರಾಸ್ ಬಳಿ ನಡೆದಿದೆ.
ಅಫಜಲ್ ಪುರ ಪಟ್ಟಣ ನಿವಾಸಿಯಾದ ಬೈಕ್ ಸವಾರ ಕಲಬುರಗಿಗೆ ಹೋಗುತ್ತಿದ್ದ ವೇಳೆ, ಇಂಗಳಗಿ ಕ್ರಾಸ್ ಬಳಿ ಜಿಂಕೆ ಬೈಕ್ ಗೆ ಅಡ್ಡ ಬಂದಿದ್ದು, ನಿಯಂತ್ರಣ ತಪ್ಪಿ ಜಿಂಕೆಗೆ ಢಿಕ್ಕಿ ಹೊಡೆದಿದ್ದಾನೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಅಫಜಲ್ ಪುರ ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.