Kalaburagi | ಜಿಲ್ಲೆಯಲ್ಲಿ 17.89 ಲಕ್ಷ ಗಣತಿ ನಮೂನೆ ಡಿಜಿಟಲೀಕರಣ : ಡಿಸಿ ಇಕ್ರಮ್ ಶರೀಫ್

Update: 2026-07-29 20:31 IST

ಕಲಬುರಗಿ : ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ ಅಂಗವಾಗಿ ಜಿಲ್ಲೆಯಾದ್ಯಂತ ಬುಧವಾರದ ಅಂತ್ಯಕ್ಕೆ ಒಟ್ಟು 23,71,542 ಮತದಾರರ ಪೈಕಿ 17,89,344 ಗಣತಿ ನಮೂನೆಗಳನ್ನು ಡಿಜಿಟಲೀಕರಣ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಇಕ್ರಮ್ ಶರೀಫ್ ತಿಳಿಸಿದ್ದಾರೆ.

ಬಿ.ಎಲ್.ಓ. ಗಳು ಮನೆ-ಮನೆ ಭೇಟಿ ಕೊಟ್ಟಾಗ ಇಲ್ಲಿಯವರೆಗೆ 67,464 ಜನ ಮತದಾರರು ನಿಧನ ಹೊಂದಿರುವ ಬಗ್ಗೆ, 27,347 ಮತದಾರರು ಮನೆಯಲ್ಲಿ ಇಲ್ಲದಿರುವ (ಗೈರು), 2,60,417 ಮತದಾರರು ಶಾಶ್ವತವಾಗಿ ಸ್ಥಳಾಂತರಗೊಂಡಿರುವುದು, ಇತರೆ 2,946 ಹಾಗೂ 28,520 ಮತದಾರರು ಈಗಾಗಲೆ ನೋಂದಣಿಯಾಗಿರುವ ಬಗ್ಗೆ ವರದಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News